ಹಿಂದೂ ವಿರೋಧಿ ಕಾರ್ಯಪಡೆ : ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

allwyn_130820_kamath
Published on



ಮಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಮಂಗಳೂರಿನಲ್ಲಿ ಅಸ್ಥಿತ್ವಕ್ಕೆ ತಂದಿರುವ ಕೋಮು ವಿರೋಧಿ ಕಾರ್ಯಪಡೆಯು ಹಿಂದೂ ವಿರೋಧಿ ಕಾರ್ಯಪಡೆಯಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ಭಾಸವಾಗುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳವಾರ
ಅಧಿವೇಶನದಲ್ಲಿ ಪ್ರಸ್ತಾಪಿಸಿದರು.
ಕರಾವಳಿ ಭಾಗದಲ್ಲಿ ಗೋ ಕಳ್ಳರು ರಾಜಾರೋಷವಾಗಿ ತಲವಾರು ಸಹಿತ ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದುಕೊಂಡು ಹೋಗಿ ಹತ್ಯೆ ಮಾಡುತ್ತಿದ್ದಾರೆ. ವ್ಯಾಪಕವಾಗಿ ಡ್ರಗ್ಸ್ ಪ್ರಕರಣಗಳು ಕಂಡು ಬರುತ್ತಿವೆ. ಇವುಗಳೇ ಇಲ್ಲಿನ ಗಲಭೆಗಳಿಗೆ ಮೂಲ ಕಾರಣ. ಇವುಗಳಿಗೆ ಕಡಿವಾಣ ಹಾಕಿದರೆ ಯಾವ ಗಲಭೆಯೂ ಇರುವುದಿಲ್ಲ. ಕಾರ್ಯಪಡೆಯ ಅಗತ್ಯವೂ ಇರುವುದಿಲ್ಲ ಎಂದು ಹೇಳಿದರು.
ಯಾವುದೇ ಪ್ರಕರಣವಿಲ್ಲದಿದ್ದರೂ 75-80 ವರ್ಷದ ಹಿರಿಯ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರು. ಮಧ್ಯರಾತ್ರಿಯಲ್ಲಿ ನುಗ್ಗಿ ಕಿರುಕುಳ
ನೀಡುತ್ತಿದ್ದಾರೆ. ಐವನ್ ಡಿಸೋಜರಂತಹ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ ಎಂದರೂ ಅವರ ಮೇಲೆ ಪ್ರಕರಣ ದಾಖಲಿಸಿಲ್ಲ. ಬಿಜೆಪಿ ಶಾಸಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂತಹ ತಾರತಮ್ಯ ನಡೆದಾಗ ಸಾರ್ವಜನಿಕರಲ್ಲಿ ಮತ್ತಷ್ಟು ಆಕ್ರೋಶ ಹೆಚ್ಚಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net