ಆಟವಾಡುತ್ತಾ ಕಟ್ಟೆಯಲ್ಲಿ ಮೀನು ಹಿಡಿಯಲು ಹೋದ ಬಾಲಕರಿಬ್ಬರು ನೀರುಪಾಲು! ಸ್ನೇಹಿತರ ಕಣ್ಣೆದುರೇ ದುರಂತ

New Project(2)
Published on

ಯಾದಗಿರಿ: ಕಟ್ಟೆಯಲ್ಲಿ ಮೀನು ಹಿಡಿಯಲು ಹೋದ ವಿದ್ಯಾರ್ಥಿಗಳಿಬ್ಬರು ನೀರು ಪಾಲಾದ ಘಟನೆ ಯಾದಗಿರಿ ನಗರದ ಅಮರ್ ಲೇಔಟ್​ನಲ್ಲಿ ಮಂಗಳವಾರ ಸಂಭವಿಸಿದೆ.

ನಕುಲ್(11) ಮತ್ತು ನಿಹಾಲ್ ಸಿಂಗ್​(11) ಮೃತ ದುರ್ದೈವಿಗಳು. ಶಾಲೆಗೆ ರಜೆ ಹಾಕಿ ನಾಲ್ವರು ಬಾಲಕರು ಕಟ್ಟೆ ಬಳಿ ತೆರಳಿದ್ದರು. ಈ ವೇಳೆ ನಕುಲ್​ ಮತ್ತು ನಿಹಾಲ್​ ಇಬ್ಬರೂ ಮೀನು ಹಿಡಿಯಲು ಮುಂದಾಗಿದ್ದು, ಕಾಲುಜಾರಿ ನೀರಲ್ಲಿ ಬಿದ್ದಿದ್ದಾರೆ. ಭಯಗೊಂಡ ಮತ್ತಿಬ್ಬರು ಮಕ್ಕಳು ಮನೆಗೆ ಓಡಿಹೋಗಿ ವಿಷಯ ತಿಳಿಸಿ ಕುಟುಂಬಸ್ಥರನ್ನು ಕರೆತರುವಷ್ಟರಲ್ಲಿ ನಕುಲ್​ ಮತ್ತು ನಿಹಾಲ್​ ಇಬ್ಬರೂ ನೀರಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮಕ್ಕಳ ಶವಗಳನ್ನು ಹೊರತೆಗೆದರು. ಮೃತದೇಹ ಸಿಗುತ್ತಿದ್ದಂತೆ ಪಾಲಕರ ಆಕ್ರಂದ ಮುಗಿಲು ಮುಟ್ಟಿತ್ತು. ಮೃತ ದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಯಾದಗಿರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net