ಅ.13 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸತ್ಯಾ ಅಮೃತ ಮಹೋತ್ಸವ

Published on

ಬೆಂಗಳೂರು: ಪ್ರಸಿದ್ಧ ನೃತ್ಯ ಕಲಾವಿದ ಡಾ.ಎ.ವಿ.ಸತ್ಯನಾರಾಯಣ ಅವರ 75ನೇ ಜನ್ಮಾಚರಣೆ ಹಾಗೂ ಸೃಷ್ಟಿ ಸಂಸ್ಥೆಯ 55ನೇ ವಾರ್ಷಿಕೋತ್ಸವದ ಅಂಗವಾಗಿ ಅ.13 ರಿಂದ ಮೂರು ದಿನ ‘ಸತ್ಯಾ ಅಮೃತ ಮಹೋತ್ಸವ’ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಅ.13ರಂದು ಸಂಜೆ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ರೋಟರಿ ಜಿಲ್ಲಾ ಗೌರ್ನರ್ ಸತೀಶ್ ಮಾಧವನ್, ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಕಲಾಶ್ರೀ ಸುಪರ್ಣ ಸಾಯಿವೆಂಕಟೇಶ್ ಮತ್ತು ಕರ್ನಾಟಕ ಕಲಾಶ್ರೀ ನಂದಿನಿ ಮೆಹ್ತಾರವರಿಗೆ ಗೌರವ ಸನ್ಮಾನ ನಡೆಯಲಿದೆ. ಸಂಜೆ 7ರಿಂದ ದಸರಾ ನೃತ್ಯ ಮತ್ತು ಸಾಮೂಹಿಕ ದಾಂಡಿಯಾ ನೃತ್ಯ ನಡೆಯಲಿದೆ.

ಅ.14ರಂದು ಸೃಷ್ಟಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರೊ.ಎಂ.ಆರ್. ಕೃಷ್ಣಮೂರ್ತಿಯವರಿಗೆ ಪ್ರದಾನ ಮಾಡಲಾಗುವುದು. ಶಾಸಕ ರವಿ ಸುಬ್ರಮಣ್ಯ, ಕಲಾ ವಿಮರ್ಶಕ ಡಾ.ಎಂ.ಸೂರ್ಯ ಪ್ರಸಾದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಅ.15ರಂದು ವಿವಿಧ ಕ್ಷೇತ್ರದ ಸಾಧಕರು, ಕಲಾವಿದರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಮಧ್ಯಾಹ್ನ 3ರಿಂದ ವಿವಿಧ ನೃತ್ಯ ಪ್ರದರ್ಶನ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net