ಅ.13ಕ್ಕೆ ಅಂಜಲಿ ನೃತ್ಯ ಮತ್ತು ಸಂಗೀತ ಶಾಲೆಯ ಕಲಾರ್ಪಣ ವಾರ್ಷಿಕ ನೃತ್ಯ ಹಬ್ಬ

dance
Published on

ಬೆಂಗಳೂರು: ಅಂಜಲಿ ನೃತ್ಯ ಮತ್ತು ಸಂಗೀತ ಶಾಲೆಯ ಕಲಾರ್ಪಣ-6 ವಾರ್ಷಿಕ ನೃತ್ಯ ಹಬ್ಬವನ್ನು ಅ.13ಕ್ಕೆ ಆಯೋಜಿಸಲಾಗಿದೆ.

ಜೆ.ಸಿ.ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಹಿರಿಯ ಪತ್ರಕರ್ತ ಸುದರ್ಶನ ಚನ್ನಂಗಿಹಳ್ಳಿ, ಕಲಾವಿದೆ ಗಾಯತ್ರಿ ಚಂದ್ರಶೇಖರ್, ಉಮಾ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ನೃತ್ಯ ಮತ್ತು ಸಂಗೀತದ ಪ್ರದರ್ಶನ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ದೂ. 92438 60725 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net