ಸೆಕ್ಯೂರಿಟಿ ಗಾರ್ಡ್​ನ ಕೈ-ಕಾಲು ಕಟ್ಟಿ ಹಾಕಿ ನಾಲ್ಕೂವರೆ ಲಕ್ಷ ರೂ. ಮೌಲ್ಯದ ಮದ್ಯ ದೋಚಿದ ಕುಡುಕರು!

drunk
Published on

ಚಿಕ್ಕೋಡಿ: ಇದು ಹಣ, ಬಂಗಾರ ಕದ್ದ ಸ್ಟೋರಿಯಲ್ಲ. ಸೆಕ್ಯೂರಿಟಿ ಗಾರ್ಡ್​ನ ಕೈ-ಕಾಲನ್ನು ಕಟ್ಟಿಹಾಕಿ ಮದ್ಯ(ಎಣ್ಣೆ) ದೋಚಿದ ಸುದ್ದಿ. ಟೈಂ ಅಲ್ಲದ ಟೈಂಗೆ ಬಂದು ಸೆಕ್ಯೂರಿಟಿ ಬಳಿ ಎಣ್ಣೆ ಕೇಳಿದ್ರು. ಇಷ್ಟೊತ್ತಿಗೆ ಅಂಗಡಿ ಓಪನ್​ ಮಾಡಲ್ಲ ಅಂದ ಸೆಕ್ಯೂರಿಟಿ ಗಾರ್ಡ್​ ಅನ್ನು ಕಟ್ಟಿ ಹಾಕಿ ಬರೋಬ್ಬರಿ ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ರು.

ಇಂತಹ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ವೈನ್ ಶಾಪ್​ನಲ್ಲಿ ನಿನ್ನೆ(ಗುರುವಾರ) ಮಧ್ಯರಾತ್ರಿ 1 ಗಂಟೆಯಲ್ಲಿ ಸಂಭವಿಸಿದೆ.

ವೆಂಕಟೇಶ್ವರ ವೈನ್ ಶಾಪ್​ ಬಳಿ ಬಂದ 6 ಜನರಿದ್ದ ತಂಡ, ಎಣ್ಣೆ ಕೇಳಿದ್ದಾರೆ. ಇಲ್ಲ ಸಾರ್​, ಅಂಗಡಿ ಕ್ಲೋಸ್​ ಆಗಿದೆ. ಬೆಳಗ್ಗೆ ಓಪನ್​ ಆಗುತ್ತೆ ಬನ್ನಿ ಎನ್ನುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್​ಗೆ ಜೀವ ಬೆದರಿಕೆ ಹಾಕಿ ಅಂಗಡಿಯಲ್ಲಿದ್ದ ಮದ್ಯದ ಬಾಟಲಿಗಳನ್ನು ದೋಚಿಕೊಂಡು ಹೋಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮತ್ತು ವೈನ್​ ಶಾಪ್​ ಮಾಲೀಕರು ಪರಿಶೀಲನೆ ನಡೆಸಿದರು. ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net