

ಮಂಡ್ಯ: ಪ್ರವಾಸಿಗರನ್ನು ಕರೆತಂದಿದ್ದ ಟೆಂಪೋ ಟ್ರಾವೆಲ್ ವಾಹನ ಇಳಿಜಾರಿನಲ್ಲಿನ ಹಳ್ಳಕ್ಕೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಬಳಿ ಸೋಮವಾರ ಬೆಳಗ್ಗೆ ಸಂಭವಿಸಿತ್ತು.
ಕೆರೆತೊಣ್ಣುರು ಪ್ರವಾಸಿ ಸ್ಥಳಕ್ಕೆ ಪ್ರವಾಸಿಗರನ್ನ ಟೆಂಟೋ ಟ್ರಾವೆಲ್ ವಾಹನದಲ್ಲಿ ಕರೆ ತರಲಾಗಿತ್ತು. ಪ್ರವಾಸಿಗರನ್ನ ಇಳಿಸಿ, ವಾಹನವನ್ನ ಒಂದು ಕಡೆ ನಿಲ್ಲಿಸಲಾಗಿತ್ತು. ಆ ಪ್ರದೇಶ ಇಳಿಜಾರು ಆಗಿದ್ದರಿಂದ ವಾಹನವು ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿತ್ತು.
ಟಿಟಿ ವಾಹನದಲ್ಲಿ ಯಾರು ಇಲ್ಲದ ಕಾರಣ ಸಾವು-ನೋವು ಸಂಭವಿಸಿಲ್ಲ. ಭಾರಿ ಅನಾಹುತದಿಂದ ಪಾರಾಗಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಕ್ರೇನ್ ಮೂಲಕ ಟಿಟಿ ವಾಹನವನ್ನ ಮೇಲೆಕ್ಕೆ ಎಳೆದು ತರಲಾಯಿತು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
,