

ಚಿಕ್ಕಬಳ್ಳಾಪುರ: ಇದೇ ವರ್ಷದ ಆರಂಭದಲ್ಲಿ ಪಾವಗಡದಲ್ಲಿ ಸಂಬವಿಸಿದ ಬಸ್ ದುರಂತದ ಬಳಿಕವೂ ಖಾಸಗಿ ಬಸ್ಗಳು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿಲ್ಲ.
ಈ ನಡುವೆ ಜಿಲ್ಲಾಡಳಿತ ಕೂಡ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಬಸ್ನಲ್ಲಿ ಸಂಚಸಿರುವಂತಿಲ್ಲ ಎಂಬ ಆದೇಶವನ್ನೂ ನೀಡಿದೆ. ಜಿಲ್ಲಾಡಳಿತದ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಖಾಸಗಿ ಬಸ್ಗಳು ಮಾತ್ರ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿವೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನಲ್ಲಿ ವಿದ್ಯಾರ್ಥಿಗಳು ಖಾಸಗಿ ಬಸ್ ಟಾಪ್ ಮೇಲೆ ಕುಳಿತು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಪ್ರಯಾಣ ಮಾಡುತ್ತಿದ್ದಾರೆ. ಖಾಸಗಿ ಬಸ್ ಕೂಡ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಳ್ಳುತ್ತಿವೆ. ಸ್ವಲ್ಪ ಆಯಾತಪ್ಪಿದರೂ ಭಾರೀ ದುರಂತವೇ ಸಂಭವಿಸುವ ಸಾಧ್ಯತೆ ಇದೆ.
ಇತ್ತ ಸರ್ಕಾರಿ ಬಸ್ ಗಳ ಕೊರತೆಯಿಂದ ವಿಧಿಯಿಲ್ಲದೇ ವಿದ್ಯಾರ್ಥಿಗಳು ಟಾಪ್ನಲ್ಲಿ ಪ್ರಯಾಣ ಮಾಡಬೇಕಿದೆ. ಈ ಮಾರ್ಗದಲ್ಲಿ ಸರ್ಕಾರಿ ಬಸ್ಗಳು ಬರುವುದೇ ವಿರಳ. ಇದನ್ನೇ ಲಾಭ ಮಾಡಿಕೊಂಡಿರುವ ಖಾಸಗಿ ಬಸ್ಗಳು ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಳ್ಳುತ್ತಿವೆ. ಇತ್ತ ಆರ್ಟಿಓ ಅಧಿಕಾರಿಗಳು ಕೂಡ ಈ ಬಗ್ಗೆ ಗಮನಹರಿಸಬೇಕಿದೆ. (ದಿಗ್ವಿಜಯ ನ್ಯೂಸ್)