

ರಿಯೊ ಡಿ ಜನೈರೊ : ಎಂದಿನಂತೆ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಕೋಮಾದಲ್ಲಿದ್ದ ಬ್ರೆಜಿಲ್ನ ಮಾಜಿ ಸುಂದರಿ ಹಾಗೂ ಮಾಡೆಲ್ ತನ್ನ 27ನೇ ವಯಸ್ಸಿಗೆ ಸಾವನ್ನಪ್ಪಿದ್ದಾರೆ.
ಈಕೆ ಟಾನ್ಸಿಲ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಅಧಿಕ ರಕ್ತಸ್ರಾವದಿಂದ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲೇ ಈ ಶಸ್ತ್ರ ಚಿಕಿತ್ಸೆ ನಡೆದಿತ್ತು. ಅಂದಿನಿಂದ ಕೋಮಾದಲ್ಲಿದ್ದ ಈಕೆಯ ಮೆದುಳಿನಲ್ಲೂ ರಕ್ತಸ್ತಾವವಾಗಿ ಸದ್ಯ ಆಕೆಯ ಶವನ್ನು ಮರಣೋತ್ತರ ಪರೀಕ್ಷೆಗಾಗಿ ಬ್ರೆಜಿಲ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
2018ರಲ್ಲಿ ಮಿಸ್ ಬ್ರೆಜಿಲ್ ವಿಜೇತರಾಗಿದ್ದ ಗ್ಲೇಸಿ ಕೊರಿಯಾ ಅತಿ ಹೆಚ್ಚು ಖ್ಯಾತಿ ಪಡೆದಿದ್ದರು. ಬಡತನದಲ್ಲೇ ಬೆಳೆದಿದ್ದ ಗ್ಲೇಸಿ ತನ್ನ ಜೀವನದ ಕುರಿತ ಹಲವು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳೊಂದಿಗೆ ಆಗ್ಗಾಗ್ಗೆ ಹಂಚಿಕೊಳ್ಳುತ್ತಿದ್ದರು. 8 ವರ್ಷದವಳಿದ್ದಾಗಲೇ ಕೆಲಸ ಆರಂಭಿಸಿದ್ದೇನೆ ಎಂದೂ ಹೇಳಿಕೊಂಡಿದ್ದರು. ಈಕೆಯ ಸಾವಿಗೆ ಬ್ರೆಜಿಲ್ ಸರ್ಕಾರ ತೀವ್ರ ಶೋಕ ವ್ಯಕ್ತಪಡಿಸಿದೆ. (ಏಜೆನ್ಸೀಸ್)