ಪಾವಗಡದ ಪಳವಳ್ಳಿ ಕಟ್ಟೆ ಬಸ್ ಅಪಘಾತ ಪ್ರಕರಣ: ಮೃತರ ಸಂಖ್ಯೆ 7ಕ್ಕೇ ಏರಿಕೆ, ಪಿಯು ವಿದ್ಯಾರ್ಥಿ ಸಾವು

pavagada accident
Published on

ತುಮಕೂರು: ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಸ್ ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಚಿಕಿತ್ಸೆ ಫಲಿಸದೇ ಗಾಯಾಳು ಮಹೇಂದ್ರ (18) ಮೃತಪಟ್ಟಿದ್ದಾನೆ. ಕಳೆದ ಒಂದು ವಾರದಿಂದ ಮಹೇಂದ್ರ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ಸುತ್ತಿ, ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಅಪಘಾತದಲ್ಲಿ ಮಹೇಂದ್ರನಿಗೆ ತಲೆಗೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿತ್ತು. ಸದ್ಯ ಚಿಕಿತ್ಸೆ ಫಲಿಸದೇ ಮಹೇಂದ್ರ ಮೃತಪಟ್ಟಿದ್ದಾನೆ. ಕಳೆದ 19ರಂದು ಪಾವಗಡದ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಪಲ್ಟಿ ಹೊಡೆದಿತ್ತು. ಪಾವಗಡ ತಾಲೂಕಿನ ಬುಡ್ಡಾರೆಡ್ಡಿಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಮಹೇಂದ್ರ ಗಾಯಗೊಂಡಿದ್ದ.

ಪಾವಗಡದಲ್ಲಿ ಮಹೇಂದ್ರ ದ್ವಿತೀಯ ಪಿಯುಸಿ ಓದುತ್ತಿದ್ದ ಮಹೇಂದ್ರ. ಘಟನೆ ನಡೆದ ಒಂದು ವಾರದ ಬಳಿಕ ಸಾವು-ಬದುಕಿನ ನಡುವೆ ಹೋರಾಡಿ ಇಂದು ಮೃತಪಟ್ಟಿದ್ದಾನೆ. ಇಂದು ಮಧ್ಯಾಹ್ನ ಸ್ವಗ್ರಾಮದಲ್ಲಿ ಮಹೇಂದ್ರನ ಅಂತ್ಯಕ್ರಿಯೆ ನಡೆಯಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net