

ಹುಬ್ಬಳ್ಳಿ: ಶಾಲಾ ಸಮವಸ್ತ್ರ ಧರಿಸದೆ ಬುರ್ಖಾಕಾಧಾರಿಯಾಗಿ ಬಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಮೇಲ್ವಿಚಾರಕರ ಮನವಿ ಮೇರೆಗೆ ವಾಪಸ್ ಮನೆಗೆ ತೆರಳಿ ಸಮವಸ್ತ್ರ ಧರಿಸಿಕೊಂಡು ವಾಪಸ್ ಬಂದ ಘಟನೆ ಹುಬ್ಬಳ್ಳಿಯ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ಸಂಭವಿಸಿದೆ.
ವಿದ್ಯಾರ್ಥಿನಿಯೊಬ್ಬಳು ಬುರ್ಕಾ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದರು. ತಪಾಸಣೆ ವೇಳೆ ವಿದ್ಯಾರ್ಥಿನಿ ಸಮವಸ್ತ್ರ ಧರಿಸದೇ ಇರುವುದು ಕಂಡು ಬಂದ ಹಿನ್ನೆಲೆ, ಸಮವಸ್ತ್ರ ಧರಿಸಿಕೊಂಡು ಬರುವಂತೆ ಅಧಿಕಾರಿಗಳು ತಿಳಿಹೇಳಿದರು. ಸಮವಸ್ತ್ರ ಧರಿಸಿಕೊಂಡು ಬರಲು ಪಾಲಕರ ಜತೆ ಮನೆಗೆ ವಾಪಸ್ಸಾಗಿದ್ದ ವಿದ್ಯಾರ್ಥಿನಿ, ಕೆಲವೇ ನಿಮಿಷದಲ್ಲಿ ಸಮವಸ್ತ್ರ ಧರಿಸಿಕೊಂಡು ಬಂದು ಪರೀಕ್ಷಾ ಕೊಠಡಿಗೆ ತೆರಳಿದ್ದಾಳೆ.