More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ: ಗುಲಾಬಿ ಹೂ ಕೊಟ್ಟು ಶುಭ ಕೋರಿದ ಬಿಇಒ

    ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು, 34 ಶೈಕ್ಷಣಿಕ ಜಿಲ್ಲೆಗಳ 3,444 ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಕೊಟ್ಟು ಶುಭಕೋರಿದ್ದಾರೆ.

    ಬೆಳಗಾವಿಯಲ್ಲಿ ಪರೀಕ್ಷೆ ಬರೆಯಲು ಹಾಜರಾದ ವಿದ್ಯಾರ್ಥಿಗಳ ಮೇಲೆ ಗೋಕಾಕ ನಗರದ ಮಯೂರ್ ಸ್ಕೂಲ್​ನಲ್ಲಿ ಪುಷ್ಪವೃಷ್ಠಿ ಮಾಡಿ, ಗುಲಾಬಿ ಹೂ ನೀಡಿದ ಬಿಇಒ ಜಿ.ಬಿ. ಬಳಗಾರ್ ಅವರು ಆಲ್ ದಿ ಬೆಸ್ಟ್ ಹೇಳಿದರು.

    ತುಮಕೂರಿನ ಎಂಪ್ರೆಸ್ ಶಾಲೆಗೆ ಭೇಟಿ ಕೊಟ್ಟ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ: ಗುಲಾಬಿ ಹೂ ಕೊಟ್ಟು ಶುಭ ಕೋರಿದ ಬಿಇಒ

    ಪರೀಕ್ಷಾ ಕೊಠಡಿಗೆ ಹಿಜಾಬ್ ಧರಿಸಿ ಬರುವವರಿಗೆ ಪ್ರವೇಶ ಇಲ್ಲ ಎಂಬ ನಿಯಮ ಇದ್ದರೂ ಕೆಲ ವಿದ್ಯಾರ್ಥಿಗಳು ಆಗಮಿಸಿದ್ದರು. ಮೇಲ್ವಿಚಾರಕರ ಮನವಿ ಮೇರೆಗೆ ಹಿಜಾಬ್​ ತೆಗೆದಿಟ್ಟು ವಿದ್ಯಾರ್ಥಿಗಳು ಎಕ್ಸಾಂ ಕೊಠಡಿ ಪ್ರವೇಶಿಸಿದ ದೃಶ್ಯವೂ ಕಂಡು ಬಂತು. ಏ.11ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು, ಮೇ ಎರಡನೇ ವಾರ ಫಲಿತಾಂಶ ಪ್ರಕಟವಾಗಲಿದೆ.

    ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ: ಗುಲಾಬಿ ಹೂ ಕೊಟ್ಟು ಶುಭ ಕೋರಿದ ಬಿಇಒ

    ಸಾವಲ್ಲೂ ಪತ್ನಿಯನ್ನು ಹಿಂಬಾಲಿಸಿದ ಪತಿ: ಮೈಸೂರಿನ ದಂಪತಿಯ ಸ್ಟೋರಿ ಕೇಳಿದ್ರೆ ಕರುಳು ಚುರ್​ ಅನ್ನುತ್ತೆ

    ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

    ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts