ಕಟ್ಟೆಗೆ ಬಿದ್ದು ಅಕ್ಕ-ತಂಗಿ ಧಾರುಣ ಸಾವು: ಅಮ್ಮನ ಕಣ್ಣೆದುರೇ ನಡೆಯಿತು ಘೋರ ದುರಂತ

lake
Published on

ತುಮಕೂರು: ಬಟ್ಟೆ ತೊಳೆಯಲೆಂದು ಹೋದ ಅಮ್ಮನನ್ನೇ ಹಿಂಬಾಲಿಸಿದ ಪುಟ್ಟ ಕಂದಮ್ಮಗಳಿಬ್ಬರು ಜಲಸಮಾಧಿಯಾದ ಘಟನೆ ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರದಲ್ಲಿ ಗುರುವಾರ ಸಂಜೆ ನಡೆದಿದೆ.

ಮಂಜುಳಾ ಎಂಬುವರ ಮಕ್ಕಳಾದ ಕವನ(7) ಮತ್ತು ಯೋಕ್ಷಿತಾ(3) ಮೃತರು. ಮನೆ‌ ಸಮೀಪದ ಬಳಿಯ ಕಟ್ಟೆಯೊಂದರಲ್ಲಿ ತುಂಬಿದ್ದ ಮಳೆ ನೀರಲ್ಲಿ ಬಟ್ಟೆ ತೊಳೆಯಲೆಂದು ಗುರುವಾರ ಸಂಜೆ ಕವನಾ ಮತ್ತು ಯೋಕ್ಷಿತಾರ ತಾಯಿ ಮಂಜುಳಾ ಹೋಗಿದ್ದರು. ಅಮ್ಮನ ಜತೆ ಮಕ್ಕಳೂ ಹೋಗಿದ್ದರು. ಅಲ್ಲೇ ಆಟವಾಡುತ್ತಿದ್ದ ಮಕ್ಕಳು ಕಾಲುಜಾರಿ ಕಟ್ಟೆಯೊಳಗೆ ಬಿದ್ದರು. ಅವರ ರಕ್ಷಣೆಗಾಗಿ ತಾಯಿಯೂ ಕಟ್ಟೆಗೆ ಹಾರುತ್ತಿದ್ದಂತೆ ಸ್ಥಳೀಯರು ಮೂವರ ರಕ್ಷಣೆಗೆ ಧಾವಿಸಿದ್ದರು. ಅಷ್ಟರಲ್ಲಿ ಮಕ್ಕಳಿಬ್ಬರು ಸಾವನ್ನಪ್ಪಿದ್ದರು‌‌. ತಾಯಿ ಮಂಜುಳಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆರೆ-ಕಟ್ಟೆಗಳು ಮೈದುಂಬಿ ಹರಿಯುತ್ತಿವೆ. ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುಟ್ಟಿ. ಯಾವುದೇ ಕಾರಣಕ್ಕೂ ಮಕ್ಕಳನ್ನು ಆಟವಾಡಲು ನೀರಿನ ಬಳಿ ಕರೆದೊಯ್ಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net