ಕಣಜದ ಹುಳು ಕಚ್ಚಿ ಗೃಹರಕ್ಷಕ ಸಿಬ್ಬಂದಿ ಸಾವು! ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಸಂತೋಷ್​

New Project (28)
Published on

ಮಂಗಳೂರು: ಕಣಜದ ಹುಳುಗಳ ದಾಳಿಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಬಂದಿದ್ದ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ತನ್ನ ಪ್ರಾಣವನ್ನೇ ಅರ್ಪಿಸಿದ್ದಾರೆ.

ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್(35) ಮೃತ ದುರ್ದೈವಿ. ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಸಂತೋಷ್​ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚಿಗೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಎಂಬಲ್ಲಿ ಕಣಜದ ಹುಳುಗಳ ದಾಳಿಯಿಂದ ಶಾಲಾ ಮಕ್ಕಳನ್ನು ರಕ್ಷಿಸಿದ್ದರು. ಈ ವೇಳೆ ಸಂತೋಷ್​ಗೆ ಕಣಜದ ಹುಳುಗಳ ಕಡಿದಿದ್ದವು.

ಕಣಜದ ಹುಳುಗಳ ಕಡಿತಕ್ಕೆ ಒಳಗಾಗಿದ್ದ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಸಂತೋಷ್ ದಾಖಲಿಸಿದ್ದರು. ತಾನು ಕೂಡ ಕಣಜದ ಹುಳುಗಳ ಕಡಿತಕ್ಕೆ ಒಳಗಾಗಿದ್ದರೂ ಚಿಕಿತ್ಸೆ ಪಡೆಯದೆ ಸಂತೋಷ್ ಮನೆಗೆ ತೆರಳಿದ್ದರು. ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡು ಸಂತೋಷ್ ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net