ಕಟೀಲಿನಲ್ಲಿ 14 ಜೋಡಿಗಳಿಗೆ ಸರಳ ವಿವಾಹ

kateelu
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ 14 ಜೋಡಿಗಳಿಗೆ ಸರಳ ವಿವಾಹ ನಡೆಯಿತು
Published on

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ 14 ಜೋಡಿಗಳಿಗೆ ಸರಳ ವಿವಾಹ ನಡೆಯಿತು. ಮೇ 5ರ ಬಳಿಕ ಮುಹೂರ್ತ ಇಲ್ಲದ ಕಾರಣ ಮದುವೆಗಳಾಗುತ್ತಿರಲಿಲ್ಲ. ಮೌಢ್ಯ ಕಳೆದು ಜುಲೈ 10, 12, 14 ಮತ್ತು 15ಕ್ಕೆ ಮುಹೂರ್ತ ಇದೆ. ಬಳಿಕ ಆಟಿ. ಮತ್ತೆ ಆಗಸ್ಟ್ 19ರ ಬಳಿಕವೇ ಮುಹೂರ್ತವಿರುವುದು. ಜುಲೈ 12ಕ್ಕೆ 14 ಹಾಗೂ ಜುಲೈ 14ಕ್ಕೆ 15 ವಿವಾಹಗಳು ನೋಂದಣಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net