ಎಎಪಿ ವಾರ್ಡ್ ಅಧ್ಯಕ್ಷೆಯ ಜೀವ ಕಾಪಾಡಿದ ಕಟ್ಟಡ ಕಾರ್ಮಿಕರು, ಫುಡ್​ ಡೆಲಿವರಿ ಬಾಯ್ಸ್​!

New Project(30)
Published on

ಬೆಂಗಳೂರು: ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಮಳೆನೀರಿನಿಂದ ತುಂಬಿ ಹೋಗಿದ್ದ ರಸ್ತೆಯ ನಡುವೆ ಬಿದ್ದಿದ್ದ ಎಎಪಿ ಅಗರ ವಾರ್ಡಿನ ಅಧ್ಯಕ್ಷೆ ಪಲ್ಲವಿ ಚಿದಂಬರ ಅವರನ್ನು ಅಲ್ಲಿನ ಕಟ್ಟಡ ಕಾರ್ಮಿಕರು ಹಾಗೂ ರಸ್ತೆಯಲ್ಲಿ ತೆರಳುತ್ತಿದ್ದ ಫುಡ್​ ಡೆಲಿವರಿ ಬಾಯ್ಸ್​ ಕಾಪಾಡಿ ಮಾನವೀಯತೆ ಮೆರೆದಿದ್ದಾರೆ.

ಘಟನೆ ಬಗ್ಗೆ ಪಲ್ಲವಿ ಚಿದಂಬರ ಅವರು ವಿವರಿಸಿರುವ ವಿಡಿಯೋವನ್ನು ಎಎಪಿ ಕೂ ವೇದಿಕೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪಲ್ಲವಿ ಅವರು ಮಾತನಾಡಿದ್ದು, ತಮ್ಮ ಪ್ರಾಣ ಕಾಪಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜತೆಗೆ ರಸ್ತೆಯ ಅವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

'ಜಯನಗರದಿಂದ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ವೇಳೆ ರಸ್ತೆ ಮಳೆ ನೀರಿನಿಂದ ತುಂಬಿ ಹೋಗಿತ್ತು. ರಸ್ತೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಲು ಬೈಕ್ ತಿರುಗಿಸುವ ವೇಳೆ ಆಯತಪ್ಪಿ ಬಿದ್ದೆ. ರಸ್ತೆ ಬದಿ ಎಲ್ಲೆಂದರಲ್ಲಿ ಗುಂಡಿಗಳೇ ಆವರಿಸಿವೆ. ರಸ್ತೆಯ ಅಂಚಿನಲ್ಲೂ ಡಾಂಬರು ಕಿತ್ತು ಹಾಳಾಗಿದೆ. ರಸ್ತೆಯಲ್ಲೂ ಗುಂಡಿಗಳಿವೆ. ಮಳೆ ಬಂದಿದ್ದರಿಂದ ರಸ್ತೆಯಲ್ಲಾ ಜಾಲವೃತವಾಗಿತ್ತು. ಗುಂಡಿ ಇರೋದು ಕೂಡ ಕಾಣದೆ, ಬೈಕ್​ನಿಂದ ಕೆಳಗೆ ಬಿದ್ದೆ. ನೀರಿನಿಂದ ತುಂಬಿ ಹೋಗಿದ್ದ ರಸ್ತೆಯಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದ್ದ ವೇಳೆ ಕಾರ್ಮಿಕರು ಹಾಗೂ ಫುಡ್​​ ಡೆಲಿವರಿ ಹುಡುಗರು ನನ್ನ ಜೀವ ಕಾಪಾಡಿದರು. ಅವರಿಗೆ ನನ್ನ ಕಡೆಯಿಂದ ಹೃತ್ಫೂರ್ವಕ ಧನ್ಯವಾದಗಳು' ಎಂದು ಪಲ್ಲವಿ ಚಿದಂಬರ ಹೇಳಿದ್ದಾರೆ.

Koo App
Our leader Pallavi Chidambar’s life was saved by onlookers and workers after she fell down in a potholes of the size of a ditch.
View attached media content
-AAP Bengaluru (@AAPBangalore)22 June 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net