ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಡೇಟ್ ಫಿಕ್ಸ್

kantara
Published on

ಬೆಂಗಳೂರು: ಬೆಲ್ ಬಾಟಮ್ ಸಿನಿಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಅಭಿನಯದ ಮತ್ತೊಂದು ಸಿನಿಮಾ 'ಕಾಂತಾರ'. ಮುಂದಿನ ತಿಂಗಳು ಈ ಸಿನಿಮಾ ತೆರೆ ಕಾಣಲಿದ್ದು, ಮೊದಲ ವಿಡಿಯೋ ಸಾಂಗ್​ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.

ಕಾಂತಾರ ಸಿನಿಮಾದ 'ಸಿಂಗಾರ ಸಿರಿಯೆ - ಶಿವನೆದೆಯಲಿ ಲೀಲಾಳ ರಸಮಂಜರಿ' ಎಂಬ ಮೊದಲ ವಿಡಿಯೋ ಹಾಡು ಸ್ವಾತಂತ್ರ್ಯ ದಿನಾಚರಣೆಯಂದು (ಆ.15) ಮಧ್ಯಾಹ್ನ 12.58ಕ್ಕೆ ಬಿಡುಗಡೆಯಾಗಲಿದೆ. ಪ್ರಮೋದ್ ಮರವಂತೆ ಈ ಹಾಡನ್ನು ಬರೆದಿದ್ದು, ಗಾಯಕರಾದ ವಿಜಯ್ ಪ್ರಕಾಶ್, ಅನನ್ಯ ಭಟ್, ನಾಗರಾಜ್ ಪನರ್ ವಲ್ತೂರ್ ದನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಈ ಮಾಹಿತಿಯನ್ನು ಹೊಂಬಾಳೆ ಫಿಲಂಸ್ 'ಕೂ' ವೇದಿಕೆಯಲ್ಲಿ ಹಂಚಿಕೊಂಡಿದ್ದು, The heart notes of Shiva & Leela ಸಿಂಗಾರ ಸಿರಿಯೆ - ಶಿವನೆದೆಯಲಿ ಲೀಲಾಳ ರಸಮಂಜರಿ ಬಿಡುಗಡೆಯಾಗುತ್ತಿದೆ ಎಂದು ಹೇಳಿದೆ.

ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾಂತಾರ ಸೆ.30ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.

Koo App
The heart notes of Shiva & Leela❤️ ಸಿಂಗಾರ ಸಿರಿಯೆ - ಶಿವನೆದೆಯಲಿ ಲೀಲಾಳ ರಸಮಂಜರಿ #Kantara #SingaraSiriye from 15th Aug at 12:58 PM. http://bit.ly/HombaleFilms #KantaraOnSep30
View attached media content
-Hombale Films (@HombaleFilms)12 Aug 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net