

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಜನರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಆ.15ರಂದು ಬಿಎಂಟಿಸಿ ಬಸ್ನಲ್ಲಿ ಉಚಿತ ಪ್ರಯಾಣ ಇರಲಿದೆ. ಇಡೀ ದಿನ ವೋಲ್ವೋ ಸೇರಿ ಎಲ್ಲ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರು ಹಣ ಪಾವತಿಸದೆ ಫ್ರೀಯಾಗಿ ಸಂಚರಿಸಬಹುದು.
ಉಚಿತ ಪ್ರಯಾಣ ಕೊಟ್ಟರೆ ಬಿಎಂಟಿಸಿಗೆ 3 ಕೋಟಿ ರೂಪಾಯಿ ನಷ್ಟ ಆಗುತ್ತೆ. ಆದರೂ ಕೂಡ ಬಿಎಂಟಿಸಿ ಈ ಆಫರ್ ನೀಡಿದೆ. ಬಿಎಂಟಿಸಿ ಆರಂಭಗೊಂಡು 25 ವರ್ಷ. ಜತೆಗೆ 75ನೇ ಸ್ವಾತಂತ್ರ್ಯೋತ್ಸವ. ಈ ಎರಡೂ ಸಂಭ್ರಮಾಚಾರಣೆ ಹಿನ್ನೆಲೆ ಆ.15ರಂದು ಬೆಂಗಳೂರಿನಾದ್ಯಂತ ಉಚಿತ ಪ್ರಯಾಣಕ್ಕೆ ಬಿಎಂಟಿಸಿ ಅವಕಾಶ ಕಲ್ಪಿಸಿದೆ.
ಜತೆಗೆ ಯಾರೆಲ್ಲಾ ಒಂದೇ ಒಂದು ಅಪಘಾತ ಮಾಡದಂತೆ ಬಸ್ ಚಾಲನೆ ಮಾಡಿದ್ದಾರೋ ಆ ಚಾಲಕರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತೆ. ಅಮೃತ ಮಹೋತ್ಸವ ಹಿನ್ನೆಲೆ ಆ.14ರಂದು 75 ಎಲೆಕ್ಟ್ರಿಕ್ ಬಸ್ಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ 90 ಎಲೆಕ್ಟ್ರಿಕ್ ಬಸ್ಗಳು ಓಡಾಡ್ತಿವೆ. (ದಿಗ್ವಿಜಯ ನ್ಯೂಸ್)