

ಬೆಂಗಳೂರು: ತನಿಖೆಯಲ್ಲಿ ದಕ್ಷತೆ ಮೆರೆದ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆ ಪದಕ ಒಲಿದಿದೆ.
ತನಿಖಾ ವಿಭಾಗದಲ್ಲಿ ಉತ್ತಮ ದಕ್ಷತೆ ಪ್ರದರ್ಶಿಸಿದ ಲೋಕಾಯುಕ್ತ ಎಸ್ಪಿ ಕೆ.ಲಕ್ಷ್ಮಿಗಣೇಶ್, ಹುಬ್ಬಳ್ಳಿ ಹೆಸ್ಕಾಂ ವಿಭಾಗದ ಎಸ್ಪಿ ಶಂಕರ್ ಕೆ ಮರಿಹಾಳ್, ಸಿಂಧನೂರು ಉಪ ವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಎಂ.ಆರ್.ಗೌತಮ್, ಕಲಬುರಗಿ ಸಿಐಡಿ ಡಿವೈಎಸ್ಪಿ ಶಂಕರೇಗೌಡ ಪಾಟೀಲ್, ದಾವಣಗೆರೆಯ ಬಸವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಚ್.ಗುರುಬಸವರಾಜ್ ಅವರಿಗೆ 2022ನೇ ಸಾಲಿನ ಪ್ರತಿಷ್ಟಿತ ಕೇಂದ್ರ ಗೃಹ ಮಂತ್ರಿ ಪದಕ ಒಲಿದಿದೆ.