ಮೈಸೂರಿನ ಚಹಾ ಮಾರುವವರ ಮಗಳ ಹೆಗಲಿಗೆ ದೆಹಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಎನ್​ಸಿಸಿ ನೇತೃತ್ವ!

ncc pramila kuvar
Published on

ಮೈಸೂರು: ದೆಹಲಿಯಲ್ಲಿ ಬುಧವಾರ(ಜ.26) ನಡೆಯಲಿರುವ 73ನೇ ಗಣರಾಜ್ಯೋತ್ಸವ ಆಚರಣೆ ವೇಳೆ ಪರೇಡ್‌ನಲ್ಲಿ ಮೈಸೂರಿನಲ್ಲಿ ಚಹಾ ಮಾರುವವರ ಮಗಳು, ಬಿಎಸ್ಸಿ ವಿದ್ಯಾರ್ಥಿನಿಗೆ ಎನ್​ಸಿಸಿ ನೇತೃತ್ವ ವಹಿಸುವ ಜವಾಬ್ದಾರಿ ಒಲಿದಿದೆ.

ಮೈಸೂರಿನ ಮಹಾರಾಣಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುವರ್ ಎನ್​ಸಿಸಿ ತಂಡದ ನೇತೃತ್ವ ವಹಿಸಿದ್ದಾರೆ. ಪ್ರಮೀಳಾ ಕುವರ್ ಮೈಸೂರಿನ ವಿವಿ ಮೊಹಲ್ಲಾದ ನಿವಾಸಿ. ಎನ್​ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಪ್ರಮೀಳಾ ಅವರು ಪ್ರತಾಪ್ ಸಿಂಗ್ ಪುಷ್ಪಾಕುವರ್ ಅವರ ಪುತ್ರಿ.

ಅಂದಹಾಗೆ, ಪ್ರತಾಪ್ ಸಿಂಗ್ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ‌ ಇಟ್ಟುಕೊಂಡಿದ್ದಾರೆ. 2018ರ ದಸರಾ ಮೆರವಣಿಗೆಯಲ್ಲೂ ಪ್ರಮೀಳಾ ಎನ್​ಸಿಸಿ ತಂಡದ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net