More

    ಸಾವಲ್ಲೂ ಸಾರ್ಥಕತೆ ಮೆರೆದ ಯುವಕ! ಅಂಗಾಂಗ ದಾನ ಮಾಡಿ ಐವರ ಪ್ರಾಣ ಉಳಿಸಿದ… ಇಂತಹ ಮಹಾನ್​ ದಾನಿಯ 2 ತಿಂಗಳ ಮಗು ಅನಾಥ

    ಮೈಸೂರು: 24 ವರ್ಷದ ಯುವಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾನೆ. ಮಗನನ್ನು ಕಳೆದುಕೊಂಡ ನೋವಿನಲ್ಲೂ ಮಗನ ಅಂಗಾಂಗ ದಾನ ಮಾಡುವ ಮೂಲಕ ಐವರ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

    ಸಾವಿನಲ್ಲೂ ಮಹಾನ್​ ದಾನಿ ಆದವರ ಹೆಸರು ದರ್ಶನ್​. ಜ.18ರಂದು ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ದರ್ಶನ್​ ಅವರನ್ನು ಮೈಸೂರಿನ ಬಿಜಿಎಸ್​ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸಲಿಲ್ಲ. ಅವರ ಮೆದುಳು ನಿಷ್ಕ್ರಿಯ (ಬೆನ್​ಡೆಡ್​) ಆಗಿತ್ತು. ಇನ್ನೆಂದೂ ಮಗ ಬದುಕಿ ಬರಲಾರ ಎಂಬ ವಿಷಯ ತಿಳಿದ ಪಾಲಕರ ಆಕ್ರಂದ ಮುಗಿಲು ಮುಟ್ಟಿತ್ತು. ನೋವಿನಲ್ಲೂ ದೃಢ ನಿರ್ಧಾರ ತೆಗೆದುಕೊಂಡ ಕುಟುಂಬಸ್ಥರು ಯುವಕನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಮೂಲತಃ ಗುಂಡ್ಲುಪೇಟೆಯ ದರ್ಶನ್​, ಮೈಸೂರಿನ ಬೆಳವಾಡಿಯಲ್ಲಿ ಎಲೆಕ್ಟ್ರಿಕಲ್​ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ ಎರಡು ತಿಂಗಳ ಮಗು ಇದೆ.

    ಮೈಸೂರಿನ ಬಿಜಿಎಸ್​ ಅಪೋಲೋ ಆಸ್ಪತ್ರೆಯಿಂದ ಚೆನ್ನೈಗೆ ಯುವಕ ದರ್ಶನ್​ರ ಜೀವಂತ ಹೃದಯವನ್ನು ಶುಕ್ರವಾರ ರವಾನೆ ಮಾಡಲಾಯಿತು. ಜೀರೋ ಟ್ರಾಫಿಕ್​ ಮೂಲಕ ಮಧ್ಯಾಹ್ನ 2.20ಕ್ಕೆ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್​ 10 ನಿಮಿಷದಲ್ಲಿ ಮೈಸೂರು ವಿಮಾನ ನಿಲ್ದಾಣ ತಲುಪಿತು. ಇಲ್ಲಿಂದ ವಿಮಾನದ ಮೂಲಕ ಚೆನ್ನೈನ ಎಂಜಿಎಂ ಹೆಲ್ತ್​ಕೇರ್​ಗೆ ಹೃದಯವನ್ನು ಕಳುಹಿಸಲಾಯಿತು.

    ಒಂದು ಕಿಡ್ನಿ ಮತ್ತು ಯಕೃತ್​ ಅನ್ನು ಮೈಸೂರಿನ ಬಿಜಿಎಸ್​ ಅಪೋಲೋ ಆಸ್ಪತ್ರೆಯಲ್ಲೇ ರೋಗಿಗಳಿಗೆ ಕಸಿ ಮಾಡಲಾಯಿತು. ಇನ್ನೊಂದು ಕಿಡ್ನಿಯನ್ನು ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಕಾರ್ನಿಯಾ ಅಂಗವನ್ನು ಮೈಸೂರಿನ ನೇತ್ರ ಬ್ಯಾಂಕ್​ಗೆ ನೀಡಲಾಗಿದೆ ಎಂದು ಅಪೋಲೋ ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್​.ಜಿ.ಭರತೀಶ್​ ರೆಡ್ಡಿ ತಿಳಿಸಿದ್ದಾರೆ.

    ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

    ಮನೆಗೆ ಹೋಗುವ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ನಿಂತ ಕ್ಷಣಾರ್ಧದಲ್ಲೇ ಸ್ನೇಹಿತರಿಬ್ಬರ ಪ್ರಾಣ ಹೊತ್ತೊಯ್ದ ಜವರಾಯ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts