ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿರುವೆ... ನನಗೂ ಒಳ್ಳೆಯ ಟೈಂ ಬರುತ್ತೆ... ಎಂದ ರಮೇಶ್​ ಜಾರಕಿಹೊಳಿ

Ramesh Jarakiholi vvani
Ramesh Jarakiholi
Published on

ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಜೆಡಿಎಸ್​ ಮತ್ತು ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರವನ್ನು ಕೆಳಗಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ರಮೇಶ್​ ಜಾರಕಿಹೊಳಿ ಇದೀಗ, ನನಗೂ ಒಳ್ಳೆಯ ಕಾಲ ಬರಲಿದೆ. ನಾನೀಗ ಪ್ರತಿ ದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ... ಎಂದಿದ್ದಾರೆ.

ಬಿಎಸ್​ವೈ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್​ ಜಾರಕಿಹೊಳಿ, ಸೆಕ್ಸ್​ ಸಿಡಿ ಕೇಸ್​ನಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡರು. ಇದೀಗ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲೂ ಇವರಿಗೆ ಸ್ಥಾನ ಸಿಕ್ಕಿಲ್ಲ. ಇವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ನೀಡಲಾಗುತ್ತೆ ಎನ್ನಲಾಗಿತ್ತಾದರೂ ಆದರೂ ಕೈಗೂಡಲಿಲ್ಲ. ಈ ಬಾರಿ ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿ ಪಟ್ಟ ಕೈ ತಪ್ಪಿದ್ದು, ರಮೇಶ್​ಗೆ ಭಾರಿ ಮುಖಭಂಗ ಆದಂತಾಗಿದೆ. ಅತ್ತ ಸಿಡಿ ಕೇಸ್​ ಸಂಬಂಧ ಬಿ ರಿಪೋರ್ಟ್ ಹಾಕಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.

ಈ ಕುರಿತು ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ರಮೇಶ್​ ಜಾರಕಿಹೊಳಿ, 'ನನಗೂ ಒಳ್ಳೆಯ ಕಾಲ ಬರಲಿದೆ. ನಮ್ಮ ಅಧ್ಯಕ್ಷರನ್ನ ಭೇಟಿಯಾಗಲು ಬಂದಿದ್ದೆ. ನಮ್ಮ ಕ್ಷೇತ್ರದ ಜನರು ನನ್ನೊಟ್ಟಿಗೆ ಇದ್ದಾರೆ. ನಾನೀಗ ಪ್ರತಿ ದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ. ಬಿ ರಿಪೋರ್ಟ್ ಹಾಕೋದು ನನಗೆ ಗೊತ್ತಿಲ್ಲ. ನೋಡೋಣ ಏನಾಗುತ್ತೋ... ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net