

ಬೆಂಗಳೂರು: ರಾತ್ರಿವೇಳೆ ಬೈಕ್ನಲ್ಲಿ ಓಡಾಡುತ್ತ ಅಪರಿಚಿತ ಮಹಿಳೆಯರ ದೇಹ ಸ್ಪರ್ಶಿಸಿ ಪರಾರಿಯಾಗುತ್ತಿದ್ದ ಸೈಕೋ ಅರುಣ್ ಕುಮಾರ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಮೇ 31ರ ರಾತ್ರಿ ಕೋರಮಂಗಲದಲ್ಲಿ ಸೈಕೋ ಅರುಣ್ ಕುಮಾರ್ ಉತ್ತರ ಭಾರತ ಮೂಲದ ಯುವತಿಯ ಹಿಂಭಾಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದ. ಈ ಕುರಿತು ಯುವತಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಳು. ಪ್ರಕರಣ ಕೋರಮಂಗಲ ಪೊಲೀಸ್ ಠಾಣೆಗೆ ಹಸ್ತಾಂತರವಾಗಿತ್ತು.
40ಕ್ಕೂ ಹೆಚ್ಚು ಸಿಸಿ ಟಿವಿ ಹಾಗೂ 80 ಬೈಕ್ ಗಳ ತಪಾಸಣೆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಕೆಜಿಎಫ್ನ ರಾರ್ಬಟ್ ಸನ್ಪೇಟೆಯ ನಿವಾಸಿ. 3 ತಿಂಗಳಿನಿಂದ ಮೇಸ್ತ್ರಿ ಪಾಳ್ಯದಲ್ಲಿ ವಾಸವಿದ್ದ. ಈತ ಸಹೋದರನ ಜತೆ ಡಂಜೋ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಸಹೋದರರಿಬ್ಬರೂ ಒಂದೇ ಐಡಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಅವಧಿಯಲ್ಲಿ ಮೂರ್ನಾಲ್ಕು ಕಡೆ ಇದೇ ರೀತಿ ಕೃತ್ಯ ಎಸಗಿದ್ದಾಗಿ, ವಿಕೃತ ಆನಂದ ಪಡೆಯುತ್ತಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.