

ಕಾಸರಗೋಡು: ಕುಂಬಳೆ ರೈಲ್ವೆ ನಿಲ್ದಾಣ ಸನಿಹದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ಲಾರಿ ಕ್ಯಾಬಿನ್‌ಗೆ ಸಿಲುಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣ ಭಾರಿ ದುರಂತ ತಪ್ಪಿದೆ. ತುಂಡಾದ ವಿದ್ಯುತ್ ತಂತಿ ಸನಿಹದ ಮಸೀದಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೈಮೇಲೆ ಬಿದ್ದಿತ್ತು. ತಕ್ಷಣ ಕೆಎಸ್‌ಇಬಿ ಅಧಿಕಾರಿಗಳು ಆಸುಪಾಸಿನ ಎಲ್ಲ ವಿದ್ಯುತ್ ಸಂಪರ್ಕ ತಪ್ಪಿಸಿ, ಸಂಭಾವ್ಯ ದುರಂತ ತಪ್ಪಿಸಿದ್ದಾರೆ. ಸರಕು ಇಳಿಸಿ ಮಂಗಳೂರು ಭಾಗಕ್ಕೆ ಕಂಟೇನರ್ ಲಾರಿ ವಾಪಸಾಗುವ ಮಧ್ಯೆ ಘಟನೆ ನಡೆದಿದೆ.