ತಲೆಮರೆಸಿಕೊಂಡಿದ್ದ ಗೂಂಡಾ ವಶಕ್ಕೆ, 20ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ

arrest
Published on

ಕಾಸರಗೋಡು: ಕೊಲೆಯತ್ನ, ಸುಲಿಗೆ, ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕಾಸರಗೋಡಿನಲ್ಲಿ ತಲೆಮರೆಸಿಕೊಂಡಿದ್ದ ತೃಶ್ಯೂರ್ ಚೇಲಕ್ಕೆರೆ ಪತ್ತುಕ್ಕುಡಿ ಪುದುವೀಟಿಲ್ ನಿವಾಸಿ ಅಬ್ದುಲ್ ರಹೀಂ ಅಲಿಯಾಸ್ ಪೋತ್ತು ರಹೀಂ ಎಂಬಾತನನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ತೃಶ್ಯೂರ್ ಕುನ್ನಂಕುಳಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಗೆ ಯತ್ನಿಸಿದ್ದ ಈತ ನಂತರ ತಲೆಮರೆಸಿಕೊಂಡು ಕಾಸರಗೋಡಿನ ಬಾರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅಬ್ದುಲ್ ರಹೀಂ ಗೂಂಡಾ ಯಾದಿಗೆ ಸೇರಿದವನಾಗಿದ್ದು, ಈತನನ್ನು ಕುನ್ನಂಕುಳಂ ಠಾಣೆ ಪೊಲೀಸರ ವಶಕ್ಕೊಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net