ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

accident
Published on

ಸುಳ್ಯ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಸೋಣಂಗೇರಿ-ಬೆಳ್ಳಾರೆ ರಸ್ತೆಯ ಬೇಂಗಮಲೆಯಲ್ಲಿ ಬುಧವಾರ ನಡೆದಿದೆ. ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್ ಬ್ರೇಕ್ ಹಾಕಿದ ಪರಿಣಾಮ ಚಲಿಸುತ್ತಿದ್ದ ಮತ್ತೊಂದು ಕಾರು ಟಿಪ್ಪರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂರು ವಾಹನಗಳು ಜಖಂಗೊಂಡಿದ್ದು, ಚಾಲಕ, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net