

ಸುಳ್ಯ: ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ ಜೀಪು ಮತ್ತು ಕಾರಿನ ನಡುವೆ ಅಪಘಾತವಾಗಿದ್ದು, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ನಡೆದಿದೆ. ಮಡಿಕೇರಿಯಿಂದ ಮಂಗಳೂರು ಕಡೆಗೆ ಎಟಿಎಂ ಹಣ ಸಾಗಿಸುತ್ತಿದ್ದ ಬೊಲೆರೊ ಜೀಪು ಸುಳ್ಯದ ಕಾಯರ್ತೋಡಿಯತ್ತ ಸಂಚರಿಸುತ್ತಿದ್ದ ನಿವೃತ್ತ ಉಪನ್ಯಾಸಕ ದೇವರಗುಂಡ ಶೇಷಪ್ಪ ಗೌಡರ ಕಾರಿಗೆ ಢಿಕ್ಕಿಯಾಗಿದೆ. ಶೇಷಪ್ಪ ಗೌಡ, ಅವರ ಪತ್ನಿ, ಮಗಳು ಮತ್ತು ಮಗುವಿಗೆ ಗಾಯಗಳಾಗಿವೆ.