ಕೆಆರ್​ಎಸ್​ ಹಿನ್ನೀರಲ್ಲಿ ಮೋಜು-ಮಸ್ತಿಗೆ ಬಂದ ಯುವಕರಿಂದ ಪೊಲೀಸರಿಗೆ ಅವಾಜ್​! ಪ್ರಕರಣ ಮುಚ್ಚಿಹಾಕಲು ಯತ್ನ...

krs
Published on

ಮಂಡ್ಯ: ನಿಷೇಧವಿದ್ದರೂ ಕೆಆರ್​ಎಸ್​ ಹಿನ್ನೀರಲ್ಲಿ ಮೋಜು ಮಸ್ತಿಗೆ ಬಂದಿದ್ದ ಯುವಕರು ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಇದೀಗ ಈ ಪ್ರಕರಣವನ್ನು ಮುಚ್ಚಿಹಾಕಲು ಹಿರಿಯ ಪೊಲೀಸ್​ ಅಧಿಕಾರಿಯೇ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕರೊನಾ ಲಾಕ್​ಡೌನ್​ ಜಾರಿಯಲ್ಲಿದ್ದರೂ ಲೆಕ್ಕಿಸದೆ ಮೈಸೂರು ಮೂಲದ ಯುವಕರ ತಂಡ ಯುವತಿಯರೊಂದಿಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಹಿನ್ನಿರಿನ ಬಳಿ ಪಾರ್ಟಿ ಮಾಡಲು ಬಂದಿತ್ತು. ಅಲ್ಲಿಗೆ ಬಂದ ಕೆಆರ್​ಎಸ್​ ಭದ್ರತಾ ಪಡೆ ಪೊಲೀಸರು, ಯುವಕರ ಮೋಜು-ಮಸ್ತಿಗೆ ಬ್ರೇಕ್​ ಹಾಕಿದ್ದರು. ಈ ವೇಳೆ ಪೊಲೀಸರಿಗೆ ಅವಾಜ್ ಹಾಕಿ ಬೆದರಿಕೆ ಹಾಕಿದ್ದಾರೆ.

ಇದೀಗ ಈ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ಸಂಧಾನಕ್ಕೆ ಯತ್ನಿಸಿದ್ದಾರೆ. ಕೆಆರ್​ಎಸ್​ ಹಿನ್ನೀರಿನಲ್ಲಿ ನಿರ್ಬಂಧವಿದ್ದರೂ ಪದೇಪದೆ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಪ್ರಭಾವಿ ವ್ಯಕ್ತಿಗಳಿಂದಲೇ ನಿಷೇಧಿತ ಹಿನ್ನೀರಿನ ಪ್ರದೇಶದಲ್ಲಿ‌ ನಿಯಮ ಉಲ್ಲಂಘನೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net