ಆಕ್ಸಿಜನ್​ ಸಿಲಿಂಡರ್ ತುಂಬಿಕೊಂಡು ಆಸ್ಪತ್ರೆಗೆ ಬರುತ್ತಿದ್ದ ಟ್ಯಾಂಕರ್​ ಅಪಘಾತ!

accident
Published on

ಬೆಳಗಾವಿ: ಆಕ್ಸಿಜನ್​ ಸಿಲಿಂಡರ್ ತುಂಬಿಕೊಂಡು ಆಸ್ಪತ್ರೆಗೆ ಬರುತ್ತಿದ್ದ ಟ್ಯಾಂಕರ್​ ಲಾರಿ ಬೆಳಗಾವಿಯ ಮುತ್ನಾಳ ಗ್ರಾಮದ ಬಳಿ ಗುರುವಾರ ರಾತ್ರಿ ಅಪಘಾತಕ್ಕೀಡಾಗಿದೆ.

ಕರೊನಾ ಸೋಂಕಿತರಿಗೆ ಪೂರೈಸುವ ಉದ್ದೇಶದಿಂದ ಮೆಡಿಕಲ್ ಆಕ್ಸಿಜನ್ ಹೊತ್ತು ಬೆಳಗಾವಿ ಕಡೆಗೆ ಟ್ಯಾಂಕರ್​ ಲಾರಿ ಸಾಗುತ್ತಿತ್ತು. ಈ ವೇಳೆ ಮುತ್ನಾಳ ಗ್ರಾಮದ ಬಳಿಯ ಪೂನಾ-ಬೆಂಗಳೂರು ರಾ.ಹೆ.-4ರಲ್ಲಿ ಓವರ್​ಟೇಕ್​ ಮಾಡುವ ವೇಳೆ ಮುಂದೆ ಸಾಗುತ್ತಿದ್ದ ಲಾರಿಗೆ ಆಕ್ಸಿಜನ್ ಸಾಗಿಸುತ್ತಿದ್ದ ಟ್ಯಾಂಕರ್ ಡಿಕ್ಕಿಯಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಆಕ್ಸಿಜನ್ ಟ್ಯಾಂಕರ್ ಟೈರ್ ಬ್ಲಾಸ್ಟ್ ಆಗಿದ್ದು, ಎಕ್ಸಲ್ ತುಂಡಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಕ್ಸಿಜನ್ ಸ್ಥಳಾಂತರಿಸುವ ಕಾರ್ಯ ಶುಕ್ರವಾರ ಬೆಳಗ್ಗೆ ನಡೆಯಿತು. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net