More

    ಬೆಳ್ಳಂಬೆಳಗ್ಗೆ ಅಣ್ಣಮ್ಮ ದೇವಿ ದರ್ಶನ ಪಡೆದ ಸಿಎಂ, ಕಂಪ್ಲೀಟ್​ ಲಾಕ್​ಡೌನ್ ಸುಳಿವು ಕೊಟ್ಟೇಬಿಟ್ರು

    ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕರೊನಾ ಸೋಂಕಿನ ನಿಯಂತ್ರಣ ತಪ್ಪಿದೆ. ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಹಲವರು ನಿರ್ಲಕ್ಷಿಸುತ್ತಿದ್ದಾರೆ. ಹಾಗಾಗಿ ಲಾಕ್​ಡೌನ್​ ಒಂದೇ ಕೊನೇಯ ಅಸ್ತ್ರ ಎಂದು ತಜ್ಞರಾದಿಯಾಗಿ ಹಲವರು ಅಭಿಪ್ರಾಯಪಟ್ಟಿದ್ದಾರೆ. ಇಂದು ಸಂಜೆ ಈ ಕುರಿತು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಗಾಂಧಿನಗರದ ಅಣ್ಣಮ ದೇವಿ ದೇವಸ್ಥಾನಕ್ಕೆ‌ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು.

    ಬಳಿಕ ಮಾತನಾಡಿದ ಸಿಎಂ, ಬೆಳ್ಳಂಬೆಳಗ್ಗೆಯೇ ಅಣ್ಣಮ್ಮ ದೇವಿ ದರ್ಶನ ಪಡೆದೆ. ಕರೊನಾ ದೂರ ಆಗುವ ವಿಶ್ವಾಸ ನನಗೆ ಬಂದಿದೆ. ಕರೊನಾ ಹೋಗಲಿ ಅಂತಲೇ ತಾಯಿಗೆ ಪ್ರಾರ್ಥನೆ ಮಾಡಲು ಬಂದೆ. ಕರೊನಾ ದೂರ ಆಗಬೇಕು ಅಷ್ಟೆ. ಇದಕ್ಕಾಗಿ ಇನ್ನು ‌ಬಿಗಿಕ್ರಮ ಅನಿವಾರ್ಯ. ಜನತಾ ಕರ್ಫ್ಯೂ ಯಾರು ಸರಿಯಾಗಿ ಪಾಲನೆ ಮಾಡ್ತಾ ಇಲ್ಲ. ಲಾಕ್​ಡೌನ್ ಅನಿವಾರ್ಯ ಆಗಬಹುದು. ಇಂದಿನ ಸಭೆಯಲ್ಲಿ ಕಠಿಣ ರೂಲ್ಸ್ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ಬೆಡ್ ಸಿಗಲ್ಲ ಅಂತ ಸಿಎಂ ಮನೆ ಮತ್ತು ವಿಧಾನಸೌಧ ಬಳಿ ಬರುವುದು ಸರಿಯಲ್ಲ. ಅಧಿಕಾರಿಗಳ ಗಮನಕ್ಕೆ ತನ್ನಿ ಬೆಡ್ ಕೊಡಿಸುವ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

    ಸಂಸದ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ದಂಧೆಯನ್ನ ಹೊರ ತಂದಿದ್ದಾರೆ. ನಾನು ಅವರನ್ನ ಅಭಿನಂದಿಸುವೆ. ಅವರು ರಿಸ್ಕ್ ತಗೊಂಡು ಹಾಸಿಗೆ ಹಂಚಿಕೆ ಅವ್ಯವಹಾರ ಬಹಿರಂಗ ಮಾಡಿದ್ದಾರೆ. ಶಾಸಕ ಜಮೀರ್ ಅಹಮದ್ ಅಂತಹವರು ಹಗುರ ಮಾತು ನಿಲ್ಲಿಸಬೇಕು ಎಂದು ಸಿಎಂ ಹೇಳಿದರು.

    ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ

    ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

    ಕಂಪ್ಲೀಟ್​ ಲಾಕ್​ಡೌನ್​ ಜಾರಿ: ಇನ್ಮುಂದೆ ವಾರದಲ್ಲಿ 3 ದಿನ ಮಾತ್ರ ಅಗತ್ಯವಸ್ತು ಸಿಗುತ್ತೆ​, ಅದಕ್ಕೂ ಟೈಂ ಫಿಕ್ಸ್​

    ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts