

ಕಾರ್ಕಳ: ಯಕ್ಷಗಾನ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಂತೆ ಕಲಾವಿದರಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಕ್ಷಗಾನವೆಂದರೆ ಬರೀ ಕಲೆಯಲ್ಲ ಅದೊಂದು ದೇವರ ಆರಾಧನೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಸೂಡ ಕುಂಬ್ಳೆ ಹೊಸಮನೆಯಲ್ಲಿ ಇತ್ತೀಚೆಗೆ ಕಟೀಲು ಮೇಳದ ಯಕ್ಷಗಾನ ಬಯಲಾಟದ ಸಂದರ್ಭ ಕಲಾವಿದರನ್ನು ಗೌರವಿಸಿ, ಆಶಿರ್ವಚನ ನೀಡಿದರು.
ಮೇಳದ ಹಿರಿಯ ಕಲಾವಿದರಾದ ಮುಂಡಾಜೆ ಸದಾಶಿವ ಶೆಟ್ಟಿ, ಕುಮಾರ ಪಡ್ರೆ ಮತ್ತು ಯುವ ಭಾಗವತ ದೇವಿಪ್ರಸಾದ್ ಆಳ್ವ ತಲಪಾಡಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯರಾದ ಶಾರದಾ ಶಂಕರ ಶೆಟ್ಟಿ, ಜಿತೇಶ್ ಶೆಟ್ಟಿ ಸೂಡ, ಕಾಪು ತಾಲೂಕು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ದ.ಕ. ಹಾಲು ಒಕ್ಕೂಟ ನಿರ್ದೇಶಕಿ ಸ್ಮಿತಾ ರಿತೇಶ್ ಶೆಟ್ಟಿ, ಜ್ಯೋತಿಕಾ ಶೆಟ್ಟಿ, ಪ್ರದೀಪ್ ಶೆಟ್ಟಿ, ರೀತಾ ಶೆಟ್ಟಿ, ದೀಪಿಕಾ ಶೆಟ್ಟಿ, ಮತ್ತು ಸೂಡ ಕುಂಬ್ಳೆ ಹೊಸಮನೆ ಕುಟುಂಬಿಕರು ಉಪಸ್ಥಿತರಿದ್ದರು. ಭಾಗವತ ಸೂಡ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.