ಮನೆ ಮುಂದೆ ಆಟವಾಡುತ್ತಿದ್ದ ಒಂದು ವರ್ಷದ ಮಗು ಚರಂಡಿ ನೀರಲ್ಲಿ ಬಿದ್ದು ಸಾವು!

death case
Published on

ಬೆಳಗಾವಿ: ಮನೆಯಲ್ಲಿ ಪುಟ್ಟ-ಪುಟ್ಟ ಹೆಜ್ಜೆಯನ್ನಿಡುತ್ತಾ ಆಟವಾಡಿಕೊಂಡಿದ್ದ ಹಾಲುಗಲ್ಲದ ಕಂದಮ್ಮ ಚರಂಡಿ ನೀರಿಗೆ ಬಿದ್ದು ಪ್ರಾಣಬಿಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಲೊಳಸೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಒಂದು ವರ್ಷದ ಸಾಧಿಕಾ ಸದ್ದಾಮ್ ತಹಶೀಲ್ದಾರ್ ಮೃತ ಮಗು. ಚರಂಡಿ ನೀರು ಮುಂದೆ ಹೋಗಲು ದಾರಿ ಇಲ್ಲದ ಕಾರಣ ಮನೆ ಮುಂದೆ‌ ನಿಂತಿತ್ತು. ನಿನ್ನೆ ರಾತ್ರಿ ಮನೆ ಮುಂದೆ ಆಟವಾಡಿಕೊಂಡಿದ್ದ ಸಾಧಿಕಾ ಆಯತಪ್ಪಿ ಚರಂಡಿ ನೀರಲ್ಲಿ ಬಿದ್ದು ಪ್ರಾಣಬಿಟ್ಟಿದ್ದಾಳೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net