

ವಿಜಯನಗರ: ಶ್ರಾವಣ ಮಾಸದ ಪ್ರಮುಖ ಹಬ್ಬ ನಾಗರ ಪಂಚಮಿ. ಶುಕ್ಲಪಕ್ಷದ ಪಂಚಮಿಯಂದು ಹಲವು ಭಾಗದಲ್ಲಿ ಶ್ರದ್ಧಾ ಭಕ್ತಿಯಿಂದ ನಾಗ ದೇವತೆಯನ್ನು ಪೂಜಿಸುತ್ತಾರೆ. ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸು, ದೋಷ ಪರಿಹಾರ ಮಾಡು ಎಂದು ದೇವಸ್ಥಾನ ಹಾಗೂ ಹುತ್ತಗಳ ಬಳಿ ಬೇಡಿಕೊಂಡು ಭಕ್ತರು ಹಾಲು, ಬೆಳ್ಳಿ ಆಭರಣ ಅರ್ಪಿಸುತ್ತಾರೆ. ಆದರೆ, ಈ ಗ್ರಾಮದಲ್ಲಿ ಕೋಳಿಕುಯ್ದು ಹುತ್ತಕ್ಕೆ ರಕ್ತವನ್ನು ಬಿಡುತ್ತಾರೆ!
ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿ ಭಾನುವಾರ ಕೊರಚ ಮತ್ತು ಕೊರಮ ಸಮುದಾಯದವರು ನಾಗರ ಪಂಚಮಿಯನ್ನು ಈ ರೀತಿ ಆಚರಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಇವರು ಈ ಹಿಂದೆ ಅಡವಿಯಲ್ಲಿ ವಾಸ ಮಾಡುತ್ತಿದ್ದರು. ಈಜಲು ಗಿಡ, ಹುಲ್ಲುಗಳಿಂದ ಹಗ್ಗ ಸೇರಿ ಮತ್ತಿತರ ವಸ್ತು ತಯಾರಿಸುತ್ತಿದ್ದರು. ಆಗ ಹಾವುಗಳ ಕುಡಿತಕ್ಕೊಳಗಾಗಿ ಜನ ಸಾಯುತ್ತಿದ್ದರಂತೆ. ಈ ಬಗ್ಗೆ ಹಿರಿಯರ ಸಲಹೆ ಮೇರೆಗೆ ನಾಗರ ಪಂಚಮಿ ದಿನದಂದು ಕೋಲಿ ಬಲಿ ಕೊಟ್ಟು ರಕ್ತವನ್ನು ಹಾಲಿನಂತೆ ಹುತ್ತಕ್ಕೆ ಎರೆಯುತ್ತಾರಂತೆ! ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ.