

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರಿನಿಂದ ಬಟ್ಟೆ ಉಡುಗೊರೆ ಕೊಡಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.
ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭ ಹೆಣ್ಣು ಮಗಳೊಬ್ಬಳ ಬಳಿ "ನನಗೆ ಬಟ್ಟೆ ಹೊಲಿದು ಕೊಡುತ್ತೀರಾ?'' ಎಂದು ಪ್ರಧಾನಿ ಅವರು ಪ್ರಶ್ನಿಸಿದ್ದರು. ಸದ್ಯದಲ್ಲಿಯೇ ಆ ಹೆಣ್ಣು ಮಗಳಿಂದ ಮೋದಿ ಅವರಿಗೆ ಬಟ್ಟೆಯನ್ನು ಹೊಲಿಸಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲಾಗುವುದು ಎಂದು ರಾಮದಾಸ್ ವಿವರಿಸಿದ್ದಾರೆ.
ಮೋದಿ ಯುಗ ಉತ್ಸವದಲ್ಲಿ ವಿವಿಧ ಇಲಾಖೆ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸರ್ಕಾರವನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯ ಮಾಡುತ್ತಿದ್ದೇವೆ. ಫಲಾನುಭವಿಗಳು ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು ಎಂದು ರಾಮದಾಸ್ ಕರೆ ನೀಡಿದ್ದಾರೆ.