

ಮೈಸೂರು: ನಗರ ಹೊರವಲಯದಲ್ಲಿ ಮಗನಿಂದಲೇ ತಂದೆ ಹಾಗೂ ತಂದೆಯ ಜತೆಗಿದ್ದ ಮಹಿಳೆಯ ಬರ್ಬರ ಕೊಲೆಯಾಗಿದೆ.
ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಶಿವಪ್ರಕಾಶ್ರ ಪುತ್ರ ಸಾಗರ್ ಕೊಲೆ ಆರೋಪಿ. ಶಿವಪ್ರಕಾಶ್ ಕೆ.ಜಿ ಕೊಪ್ಪಲು ನಿವಾಸಿ. ಲತಾ ಮೈಸೂರಿನ ಶ್ರೀನಗರದ ನಿವಾಸಿ. ಗುರುವಾರ ರಾತ್ರಿ ಶಿವಪ್ರಕಾಶ್ ಶ್ರೀನಗರದಲ್ಲಿ ಲತಾಳ ಮನೆಯಲ್ಲಿದ್ದರು.
ಅಲ್ಲಿಗೆ ಮಚ್ಚು ಹಿಡಿದು ನಿನ್ನೆ ರಾತ್ರಿ ಲತಾ ಮನೆಗೆ ನುಗ್ಗಿದ ಸಾಗರ್, ತಂದೆಯನ್ನ ಬರ್ಬರವಾಗಿ ಕೊಚ್ಚಿ ಕೊಂದ. ಬಳಿಕ ಲತಾಗೂ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಇದನ್ನ ತಡೆಯಲು ಬಂದ ಲತಾಳ ಪುತ್ರ ನಾಗಾರ್ಜುನನ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಗಂಭಿರ ಗಾಯಗೊಂಡ ನಾಗಾರ್ಜುನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.