ಸಿಂಧೂರಿ v/s ಶಿಲ್ಪಾನಾಗ್​! ಇನ್ನೆರಡು ದಿನದಲ್ಲಿ ಏನಾಗುತ್ತೆ ನೋಡಿ... ಸಚಿವರ ಈ ಮಾತಿನ ಗೂಢಾರ್ಥ ಏನು?

rohini sindhuri
Published on

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ತನೆ ವಿರುದ್ಧ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ತಮ್ಮ ಆಕ್ರೋಶವನ್ನು ಆಗಿಂದಾಗ್ಗೆ ಹೊರ ಹಾಕುತ್ತಿದ್ದ ಬೆನ್ನಲ್ಲೇ ಅಧಿಕಾರಿಗಳ ಸರದಿ ಪ್ರಾರಂಭವಾಗಿದೆ. ರೋಹಿಣಿ ಸಿಂಧೂರಿ ನೀಡುತ್ತಿರುವ ಕಿರುಕುಳವನ್ನ ಸಹಿಸಲು ಆಗುತ್ತಿಲ್ಲ ಎಂದು ಐಎಎಸ್ ಅಧಿಕಾರಿ, ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಗುರುವಾರ ಐಎಎಸ್ ಹುದ್ದೆಗೇ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳುವ ಮೂಲಕ ಭಾರಿ ಸಂಚಲನ ಮೂಡಿಸಿದ್ದಾರೆ.

ಐಎಎಸ್ ಅಧಿಕಾರಿಗಳಿಬ್ಬರ ಸಂಘರ್ಷ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ‌ ಎಸ್.ಟಿ.ಸೋಮಶೇಖರ್, ಇನ್ನೆರಡು ದಿನಗಳಲ್ಲಿ ಏನಾಗುತ್ತೆ ಕಾದು ನೋಡಿ ಎಂದಿದ್ದಾರೆ. ಸಚಿವರ ಹೇಳಿಕೆಯ ಗೂಢಾರ್ಥ ಏನು? ಎಂಬ ಪ್ರಶ್ನೆ ಸಾರ್ವಜನಿಕ ವಯಲದಲ್ಲಿ ಮೂಡಿದೆ.

ಮೈಸೂರಿನಲ್ಲಿ ಹೇಳಿಕೆ ನೀಡಿದ ಸಚಿವ ಎಸ್‌ಟಿಎಸ್, ಕೋವಿಡ್ ನಿಯಂತ್ರಣ ‌ಮಾಡೋದು ನನ್ನ ಆದ್ಯತೆ‌. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಯಾರು ಸರಿ, ಯಾರು ತಪ್ಪು ಅಂತ ಹೇಳಲ್ಲ‌. ಎಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net