ಮೈಸೂರಲ್ಲಿ ವಿಕೃತ ಕಾಮಿ: ಈತನ ಗಾಳಕ್ಕೆ ಬಿದ್ದ ಯುವತಿಯರ ಪಾಡು ಹೇಳತೀರದು... ಮೊಬೈಲ್​ ನೋಡಿ ಬೆಚ್ಚಿಬಿದ್ದ ಪೊಲೀಸರು

New Project(21)
Published on

ಮೈಸೂರು: ಇಲ್ಲೊಬ್ಬ ಯುವಕ ಪ್ರೀತಿ-ಪ್ರೇಮದ ಹೆಸರಲ್ಲಿ ಯುವತಿಯರಿಗೆ ಬಲೆ ಬೀಸುತ್ತಿದ್ದ. ಬಲೆಗೆ ಬೀಳೋ ಯುವತಿರ ಜತೆ ಆಪ್ತತೆ ಬೆಳೆಸಿಕೊಂಡು ಮದ್ವೆ ಆಸೆ ಹುಟ್ಟಿಸಿ ಅಶ್ಲೀಲ ಚಾಟಿಂಗ್​ ಮಾಡುತ್ತಾ, ಯುವತಿಯರ ಬೆತ್ತಲೆ ವಿಡಿಯೋ-ಫೋಟೋಗಳನ್ನ ವಾಟ್ಸ್​ಆ್ಯಪ್​ಗೆ ಕಳಿಸುವಂತೆ ಮಾಡಿಕೊಳ್ಳುತ್ತಿದ್ದ. ಲೈಂಗಿಕವಾಗಿಯೂ ಅವರನ್ನ ಬಳಸಿಕೊಂಡು, ಖಾಸಗಿ ಕ್ಷಣದ ದೃಶ್ಯವನ್ನ ಯುವತಿಯರಿಗೆ ಗೊತ್ತಾಗದಂತೆ ವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ... ಆಮೇಲೆ ತನ್ನ ವರಸೆ ಬದಲಿಸುತ್ತಿದ್ದ... ಈತನ ಕಾಟಕ್ಕೆ ನೊಂದ ಯುವತಿಯರೆಷ್ಟೋ...

ಆ ಕಾಮುಕನ ಹೆಸರು ಶಿವಪ್ರಕಾಶ್ ಬಿ.ಜಿ., ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದವ. ನೋಡೋಕೆ ಹ್ಯಾಂಡ್​ಸಮ್ ಆಗಿದ್ದು, ಇದನ್ನೇ ಬಡವಾಳ ಮಾಡಿಕೊಂಡ ಈತ ಬಣ್ಣಬಣ್ಣದ ಮಾತುಗಳನ್ನಾಡುತ್ತಾ ಯುವತಿಯರಿಗೆ ಫೇಸ್​ಬುಕ್​, ಗೂಗಲ್​ ಮೀಟ್​ ಮೂಲಕ ಗಾಳ ಹಾಕುತ್ತಿದ್ದ. ಅವರಿಗೆ ತನ್ನ ಬೆತ್ತಲೆ ಫೋಟೋ ಕಳುಹಿಸುತ್ತಿದ್ದ. ಹಲವು ಯುವತಿಯರ ಜೊತೆ ಪ್ರೀತಿ ನಾಟಕವಾಗಿ, ಏಕಾಂತದಲ್ಲಿರೋ ವಿಡಿಯೋ ಮಾಡಿಕೊಳ್ಳುತ್ತಿದ್ದ ಕಾಮುಕ, ಹಣಕ್ಕಾಗಿ ಪೀಡಿಸುತ್ತಿದ್ದ. ಮರ್ಯಾದೆಗೆ ಅಂಜಿ ಅದೆಷ್ಟೋ ಯುವತಿಯರು ಹಣ ಕೊಟ್ಟು ಇವನ ಕಾಟ ತಪ್ಪಿದರೆ ಸಾಕಪ್ಪ ಎಂದು ನಲುಗಿದ್ದಾರಂತೆ. ಆದರೆ, ಈತನಿಂದ ಅನ್ಯಾಯಕ್ಕೊಳಗಾದ ಮೈಸೂರಿನ ಯುವತಿಯೊಬ್ಬಳು ಶಿವಪ್ರಕಾಶ್​ನ ಕರಾಳ ಮುಖವನ್ನ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.

ಮೈಸೂರು ಮೂಲದ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿ ಪ್ರೀತಿಯ ನಾಟಕ‌ವಾಡಿದ್ದ ಶಿವಪ್ರಕಾಶ್​, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಾ 20 ಲಕ್ಷ ಹಣ ಪೀಕಿದ್ದ. ನೊಂದ ಯುವತಿ ಮೈಸೂರಿನ ಮಹಿಳಾ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್​ ನೋಡಿದರೇ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಯುವತಿಯರ ಜೊತೆ ಅಶ್ಲೀಲ ಚಾಟಿಂಗ್​, ಬೆತ್ತಲೆ ದೃಶ್ಯಗಳು ಮೊಬೈಲ್​ನಲ್ಲಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net