

ಮೈಸೂರು: ತಾಲೂಕಿನ ಜಯಪುರ ಗ್ರಾಮದಲ್ಲಿ ಕೋಳಿ ಫಾರ್ಮ್ಗೆ ಲಗ್ಗೆ ಇಟ್ಟು ನಾಟಿ ಕೋಳಿ ತಿಂದು ವಿಶ್ರಮಿಸುತ್ತಿದ್ದ ಚಿರತೆಯೊಂದು ಕೋಳಿಗೂಡಿನಲ್ಲೇ ಮಂಗಳವಾರ ಮುಂಜಾನೆ ಸೆರೆಯಾಗಿದೆ.
ಜಯಪುರ ಗ್ರಾಮದ ರೈತ ಬಸಪ್ಪ ಅವರು ತಮ್ಮ ತೋಟದ ಮನೆಯಲ್ಲಿ 150 ನಾಟಿ ಕೋಳಿಗಳನ್ನು ಫಾರ್ಮ್ನಲ್ಲಿ ಸಾಕಿದ್ದರು. ಈ ಫಾರ್ಮ್ಗೆ ಸೋಮವಾರ ರಾತ್ರಿ ಆಗಮಿಸಿದ ಚಿರತೆ ಕೋಳಿಗಳನ್ನು ತಿಂದು ಆರಾಮಾಗಿ ಫಾರ್ಮ್ ನಲ್ಲೇ ರಾತ್ರಿ ವಿಶ್ರಾಂತಿ ಪಡೆದಿದೆ.
ಬೆಳಗಿನ ಜಾವ 4.45ರ ವೇಳೆಗೆ ಕೋಳಿಗಳನ್ನು ನೋಡಲು ಬಸಪ್ಪ ಫಾರ್ಮ್ಗೆ ಆಗಮಿಸಿ ಟಾರ್ಚ್ ಬಿಟ್ಟ ಸಂದರ್ಭ ಚಿರತೆ ಘರ್ಜಿಸಿತು. ತಕ್ಷಣ ಬಾಗಿಲು ಹಾಕಿದ ಬಸಪ್ಪ ಅವರು ಚಿರತೆ ಹೊರ ಹೋಗದಂತೆ ನೋಡಿಕೊಂಡರು.
ಚಿರತೆ ಕೋಳಿ ಫಾರ್ಮ್ಗೆ ಆಗಮಿಸಿದ ವಿಚಾರವನ್ನು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.