ಹೃದಯಾಘಾತ: ಮುಧೋಳ ತಹಸೀಲ್ದಾರ್ ನಿಧನ

New Project(30)
Published on

ಬಾಗಲಕೋಟೆ: ಹೃದಯಾಘಾತದಿಂದ ಮುಧೋಳ ತಹಸೀಲ್ದಾರ್ ಸಂಗಮೇಶ್ ಬಾಡಗಿ(38) ಮೃತಪಟ್ಟಿದ್ದಾರೆ.

ಗುರುವಾರ ಮಧ್ಯರಾತ್ರಿ ಮುಧೋಳ ನಗರದ ಮನೆಯಲ್ಲಿ ಮಲಗಿದ್ದ ವೇಳೆ ತಹಸೀಲ್ದಾರ್​ಗೆ ಹೃದಯಾಘಾತವಾಗಿದೆ. ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಅಥಣಿ ತಾಲೂಕಿನ ಜನವಾಡ ಮೂಲದ ಸಂಗಮೇಶ್ ಬಾಡಗಿ ಅವರು ಮೂರು ವರ್ಷದಿಂದ ಮುಧೋಳ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಂಗಮೇಶ್ ಬಾಡಗಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಧೋಳ‌ ನಿವಾಸಕ್ಕೆ ಜಮಖಂಡಿ ಎಸಿ ಸಿದ್ದು ಹುಲ್ಲಳ್ಳಿ ಸೇರಿದಂತೆ ಅನೇಕ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net