ಕಲರ್​ ಡ್ರೆಸ್​ನಲ್ಲಿ ಬಂದರೂ SSLC ಎಕ್ಸಾಂ ಬರೆಯಲು ಅವಕಾಶ: ಸಚಿವ ಬಿ.ಸಿ.ನಾಗೇಶ್​

bc nagesh
Published on

ಬೆಂಗಳೂರು: ವಿದ್ಯಾಥಿರ್ಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಶಾಲಾ ಸಮವಸ್ತ್ರ ಇಲ್ಲದೆ, ಕಲರ್​ ಡ್ರೆಸ್​ನಲ್ಲಿ ಬಂದರೂ ಅವಕಾಶ ನೀಡುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಹೇಳಿದ್ದಾರೆ.

ಸೋಮವಾರ ವಿಧಾನ ಪರಿಷತ್​ನಲ್ಲಿ ಶೂನ್ಯವೇಳೆ ಕಾಂಗ್ರೆಸ್​ನ ಪ್ರಕಾಶ್​ ರಾಥೋಡ್​, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾಥಿರ್ಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿರುವ ನಿಯಮವನ್ನು ಸಡಿಲ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಮೊದಲಿನಿಂದಲೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಸಮವಸ್ತ್ರ ಇಲ್ಲದಿದ್ದ ಪಕ್ಷದಲ್ಲಿ ಕಲರ್​ ಡ್ರೆಸ್​ನಲ್ಲಿ ಬಂದರೂ ಅವಕಾಶ ನೀಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net