ರಸ್ತೆಗೆ ಅಡ್ಡ ಬಂದ ನಾಯಿಯ ಪ್ರಾಣ ಉಳಿಸಲು ಹೋಗಿ ಹಾಲಿನ ವಾಹನ ಪಲ್ಟಿ

milk van accident
Published on

ಧಾರವಾಡ: ಬೀದಿನಾಯಿಗೆ‌‌ ಡಿಕ್ಕಿ‌ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಹಾಲಿನ ವಾಹನವೇ ನಡುರಸ್ತೆಯಲ್ಲಿ ಪಲ್ಟಿಯಾಗಿದ್ದು, ಒಂದು ಸಾಔಇರ ಲೀಟರ್​ ಹಾಲು ರಸ್ತೆ ಪಾಲಾಗಿದೆ.

ಧಾರವಾಡ ನಗರದ ಜೆಎಸ್ಎಸ್‌ ಕಾಲೇಜ್ ಬಳಿ‌ ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಧಾರವಾಡ ಕೆಎಂಎಫ್‌ಗೆ‌ ಉತ್ತರ‌ ಕನ್ನಡ ಜಿಲ್ಲೆಯ ಹಳಿಯಾಳದಿಂದ ಹಾಲು ತುಂಬಿದ್ದ ಕ್ಯಾನ್​ಗಳನ್ನು ಇಟ್ಟುಕೊಂಡು ಬರುತ್ತಿದ್ದ ಬುಲೇರೊ‌ ಗೂಡ್ಸ್ ವಾಹನ ಅಪಘಾತಕ್ಕೀಡಾಗಿದೆ.

ರಸ್ತೆಗೆ ಬಂದ ಬೀದಿನಾಯಿಗೆ ಹಾಲಿನ ವಾಹನ ಡಿಕ್ಕಿಯಾಗುವುದನ್ನ ತಪ್ಪಿಸಲು ಯತ್ನಿಸಿದ ಚಾಲಕ ಬಿಆರ್​ಟಿಎಸ್ ಕಾರಿಡಾರ್‌ನ ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ರಸ್ತೆ ಮಧ್ಯೆ ವಾಹನ ಪಲ್ಟಿಯಾಗಿದ್ದು, ಹಾಲೆಲ್ಲ ರಸ್ತೆಪಾಲಾಗಿದೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net