ಮಂಗಳೂರಲ್ಲಿ ಫ್ಲ್ಯಾಟ್​ನ ಕಿಟಕಿ ಕರ್ಟನ್​ ಸರಿ ಮಾಡಲು ಹೋಗಿ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

death
Published on

ಮಂಗಳೂರು: ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ನಿಂತು ಕಿಟಕಿಯ ಕರ್ಟನ್​ ಸರಿ ಮಾಡಲು ಹೋದ ಬಾಲಕಿಯೊಬ್ಬಳು 5ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ನಗರದ ಕಂಕನಾಡಿಯಲ್ಲಿ ಸಂಭವಿಸಿದೆ.

ಸೆಹರಾ ಇಮ್ತಿಯಾಝ್ (15) ಮೃತ ದುರ್ದೈವಿ. ನಗರದ ಲೂರ್ಡ್ಸ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಈಕೆ, ಕಂಕನಾಡಿಯ ವಿಶ್ವಾಸ್ ಕ್ರೌನ್ ಎಂಬ ಅಪಾರ್ಟ್​ಮೆಂಟ್ ನಿವಾಸಿ ಇಮ್ತಿಯಾಝ್​​​ ಎಂಬುವರ ಪುತ್ರಿ. ಬುಧವಾರ ಸಂಜೆ ಸುಮಾರು 4:30ಕ್ಕೆ ಫ್ಲ್ಯಾಟ್​ನ ಬಾಲ್ಕನಿಯ ಸೈಡ್ ಕರ್ಟನ್ ಅನ್ನು ಕುರ್ಚಿ ಮೇಲೆ ಹತ್ತಿ ಸರಿಪಡಿಸುತ್ತಿದ್ದಳು. ಈ ವೇಳೆ ಆಯತಪ್ಪಿ 5ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಗಂಭೀರ ಗಾಯಗೊಂಡ ಈಕೆಯನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ. ಕದ್ರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net