ಬಿಜೆಪಿಗೆ ಬರ್ಬೇಕು ಅಂದ್ರೆ ಈ 3 ಷರತ್ತಿಗೆ ಒಪ್ಪಬೇಕು... ಸುಮಲತಾರ ಡಿಮಾಂಡ್​ಗೆ ಬೆಚ್ಚಿಬಿದ್ದಿದೆಯಂತೆ ಬಿಜೆಪಿ!

sumalatha
ಮಗ ಅಭಿಷೇಕ್‌ ಜತೆ ಸಂಸದೆ ಸುಮಲತಾ
Published on

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್​ಗೆ ಬಿಜೆಪಿ ಅನಿವಾರ್ಯನಾ? ಮಂಡ್ಯದಲ್ಲಿ ಬಿಜೆಪಿಗೆ ಸುಮಲತಾ ಅನಿವಾರ್ಯನಾ? ಎಂಬ ಪ್ರಶ್ನೆ ಎದ್ದಿದೆ.

ಮಂಡ್ಯ ಸಂಸದೆ ಆಗಿ ಸುಮಲತಾ ಆಯ್ಕೆ ಆದಾಗಿನಿಂದಲೂ ಬಿಜೆಪಿಗೆ ಸೇರ್ಪಡೆಯಾಗ್ತಾರೆ ಎಂಬ ಮಾತು ಕೇಳಿಬರುತ್ತಲೇ ಇತ್ತು. ಆದರೆ ಇದೀಗ ಈ ಮಾತು ಮತ್ತೆ ಮುನ್ನಲೆಗೆ ಬಂದಿದ್ದು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಭದ್ರ ನೆಲೆಯೂರುವ ನಿಟ್ಟಿನಲ್ಲಿ ಸುಮಲತಾಗೆ ಪಕ್ಷಕ್ಕೆ ಆಹ್ವಾನಿಸಿರುವ ಬಿಜೆಪಿ, ರತ್ನಗಂಬಳಿ ಹಾಸಿದೆ ಎಂಬ ವಿಚಾರ ಮಂಡ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಷ್ಟೇ ಅಲ್ಲ, ಸುಮಲತಾ ಅವರು ಬಿಜೆಪಿಗೆ 3 ಕಂಡಿಷನ್​ ಕೂಡ ಹಾಕಿದ್ದಾರಂತೆ. ಸುಮಲತಾರ ಡಿಮಾಂಡ್​ ಕೇಳಿ ಬಿಜೆಪಿ ಬೆಚ್ಚಿಬಿದ್ದಿದೆಯಂತೆ!

ನಾನು ಬಿಜೆಪಿಗೆ ಬರಬೇಕು ಅಂದ್ರೆ ನೀವು ನನ್ನ ಈ 3 ಡಿಮಾಂಡ್​ಗೆ ಒಪ್ಪಬೇಕು. ಹಾಗಿದ್ದರಷ್ಟೇ ನಾನು ಬರೋದು ಎಂದು ಸುಮಲತಾ ಹೇಳಿದ್ದಾರಂತೆ. ಆ ಡಿಮಾಂಡ್​ ಲಿಸ್ಟ್​ ಇಲ್ಲಿದೆ.

1. ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಬೇಕು

2. ಮಂಡ್ಯ ಜಿಲ್ಲೆಯ ಟಿಕೆಟ್​ ಹಂಚಿಕೆ ವಿಚಾರದಲ್ಲಿ ನನಗೆ ಫ್ರೀ ಹ್ಯಾಂಡ್​ ಕೊಡಬೇಕು

3. ಮದ್ದೂರಿನಲ್ಲಿ ಅಭಿಷೇಕ್​ಗೆ ಬಿಜೆಪಿಯಿಂದ ಟಿಕೆಟ್​ ಕೊಡಬೇಕು

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ 4 ಸ್ಥಾನ ಗೆಲ್ಲಬೇಕೆಂದು ಲೆಕ್ಕಚಾರ ಹಾಕಿರುವ ಬಿಜೆಪಿ, ಸುಮಲತಾ ಅವರನ್ನ ಪಕ್ಷಕ್ಕೆ ಆಹ್ವಾನಿಸಿದೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಜಿಲ್ಲೆಗೆ ಶೀಘ್ರದಲ್ಲೇ ಭೇಟಿ ನೀಡಲಿದ್ದು, ಅವರ ಸಮ್ಮುಖದಲ್ಲಿ ಸುಮಲತಾ ಅವರು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದೆಲ್ಲವರೂ ತಳ್ಳಿಹಾಕಿರುವ ಸುಮಲತಾ ಅವರು, ಬಿಜೆಪಿ ಸೇರುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಜಿಲ್ಲೆಯ ಜನರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net