More

    ಜೆಡಿಎಸ್​ ಪಕ್ಷವನ್ನೇ ವಿಸರ್ಜನೆ ಮಾಡ್ತೀವಿ, ಮತ್ತೆ ಮತ ಕೇಳಲು ಬರಲ್ಲ: ಸವಾಲು ಸ್ವೀಕರಿಸುತ್ತಲೇ ಎಚ್​ಡಿಕೆ ಘೋಷಣೆ

    ತುಮಕೂರು: ರಾಜ್ಯದಲ್ಲಿ ಒಂದು ಸವಾಲನ್ನು ಸ್ವೀಕಾರ ಮಾಡಿದ್ದೇವೆ. ಮುಂದಿನ ಚುನಾವಣೆ ನಂತರ ಐದು ವರ್ಷಗಳ ಕಾರ್ಯಕ್ರಮದಲ್ಲಿ ನಾವು ಹೇಳಿದ ಎಲ್ಲ ಯೋಜನೆಯನ್ನು ಪೂರ್ಣ ಮಾಡಲಿಲ್ಲ ಅಂದ್ರೆ ಜಾತ್ಯಾತೀತ ಜನತಾದಳವನ್ನೇ ವಿಸರ್ಜನೆ ಮಾಡ್ತೀವಿ. ಮತ್ತೆ ನಿಮ್ಮ ಮುಂದೆ ಮತ ಕೇಳಲು ಬರಲ್ಲ ಎಂದು ಮಾಜಿ ಸಿಎಂ ಎಚ್​​.ಡಿ. ಕುಮಾರಸ್ವಾಮಿ ಘೋಷಿಸಿದರು.

    ತುಮಕೂರು ತಾಲೂಕಿನ ಹೆಬ್ಬೂರಿನಲ್ಲಿ ಗುರುವಾರ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಎಚ್​ಡಿಕೆ, ಎರಡು ವರ್ಷಗಳಿಂದ ಕೋವಿಡ್ ಸಂದರ್ಭದಲ್ಲಿ ನಾವು ಸುಮ್ಮನೇ ಕೂತಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡ್ತಿದ್ದೇವೆ. ಪ್ರಮುಖವಾಗಿ ಐದು ಕಾರ್ಯಕ್ರಮಗಳ ಯೋಜನೆಯನ್ನ ಮಾಡಿದ್ದೇವೆ. ಒಂದು ಶಿಕ್ಷಣ, ಮತ್ತೊಂದು ಆರೋಗ್ಯ, ನೀರಾವರಿ ಯೋಜನೆ… ಹೀಗೆ ಹಲವು ಯೋಜನೆಗಳನ್ನು ಮಾಡಿದ್ದೇವೆ. ಶಿಕ್ಷಣದಲ್ಲಿ ಎಲ್​ಕೆಜಿಯಿಂದ ಪಿಯುಸಿವರೆಗೂ ಉಚಿತ ಶಿಕ್ಷಣ. ಖಾಸಗಿ ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು ಓದಿಸಲು, ನೀವು ಸಾಲಗಾರ ಆಗುವುದನ್ನು ತಪ್ಪಿಸಲು ಉಚಿತವಾಗಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೊಡ್ತೀವಿ ಎಂದರು.

    ಉಚಿತ ಆರೋಗ್ಯ ಸೇವೆ ಕೊಡ್ತೀವಿ. ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಸೇವೆ ಒದಗಿಸುತ್ತೇವೆ. ಪ್ರತಿ ಗ್ರಾಮೀಣ ಮಟ್ಟದಲ್ಲಿ 24 ಗಂಟೆ ಕಾಲ ವೈದ್ಯರು ಸೇವೆ ಮಾಡುವಂತಹ ಯೋಜನೆಗೆ ಚಾಲನೆ ನೀಡುತ್ತೇವೆ. ಹಾಗಾಗಿ ನೀವು ಆಶೀರ್ವಾದ ಮಾಡಿ ಐದು ವರ್ಷದ ಸರ್ಕಾರವನ್ನು ನೀಡಬೇಕು. ಈ ಯೋಜನೆಗಳನ್ನು ನಾವು ಜಾರಿ ಮಾಡದಿದ್ದಲ್ಲಿ ಜಾತ್ಯಾತೀತ ಜನತಾ ದಳ ನಿಮ್ಮುಂದೆ ಎಂದೂ ಮತ ಕೇಳಲು ಬರಲ್ಲ ಎಚ್​ಡಿಕೆ ಹೇಳಿದರು.

    ಎಸ್​ಪಿಎಂ ಅವರನ್ನ ಮುಗಿಸಲು ಕಾಂಗ್ರೆಸ್​ನವರೇ ನನ್ನನ್ನು ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದ್ರು: ದೇವೇಗೌಡ

    ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

    ಸಹ್ಯಾದ್ರಿ ಕಾಲೇಜಿನಲ್ಲಿ ಪ್ರೊಫೆಸರ್​ ಹುದ್ದೆ ನೇಮಕ: ಅರ್ಜಿ ಸಲ್ಲಿಕೆಗೆ ಮೇ 7 ಕೊನೇ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts