ಮಂಡ್ಯ ಎಸ್ಪಿ ನಿವಾಸದ ಎದುರು ಅವಾಚ್ಯವಾಗಿ ನಿಂದಿಸಿ ಯುವಕನ ಕೂಗಾಟ! ಈ ಹಿಂದೆ ಎಸ್ಪಿ ಜತೆ ವೇದಿಕೆ ಹಂಚಿಕೊಂಡಿದ್ದ...

mandya sp
Published on

ಮಂಡ್ಯ: ಮಂಗಳೂರು ಮೂಲದ ಯುವಕನೊಬ್ಬ ಭಾನುವಾರ ಮುಂಜಾನೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ನಿವಾಸದ ಎದುರು ರಂಪಾಟ ನಡೆಸಿದ್ದಾನೆ.

ಎಸ್ಪಿ ಮನೆ ಮುಂದೆ ಆಗಮಿಸಿ ಅವಾಚ್ಯವಾಗಿ ನಿಂದಿಸಿ, ಕೂಗಾಟ, ಕಿರುಚಾಟ ಮಾಡುವ ಮೂಲಕ ಹೈಡ್ರಾಮಾ ಮಾಡಿದ್ದಾನೆ ಎಂಬ ಮಾತುಗಳು ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೊಳಪಟ್ಟಿದೆ.

ಈ ಬಗ್ಗೆ ಇಲಾಖೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈ ಹಿಂದೆ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ನಡೆದಿದ್ದ ಹಲವು ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿಯಾಗಿದ್ದ. ಆದರೆ ಇದ್ದಕ್ಕಿದಂತೆ ಇಂತಹ ಬೆಳವಣಿಗೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಮೂರ್ನಾಲ್ಕು ದಿನದ ಹಿಂದೆಯೂ ಈತ ಎಸ್ಪಿ ಕಚೇರಿ ಮುಂದೆ ರಂಪಾಟ ನಡೆಸಿದ್ದ ಎನ್ನಲಾಗಿದೆ.

ಪೇದೆ ದೂರು: ಭಾನುವಾರ ನಡೆದ ಘಟನೆಗೆ ಸಂಬಂಧಿಸಿದಂತೆ ನಿಖಿಲ್ ವಿರುದ್ಧ ಡಿಎಆರ್ ಪೇದೆ ಶಿವಕುಮಾರ್ ಮಂಡ್ಯ ಪಶ್ಚಿಮ ಠಾಣೆಗೆ ದೂರು ನೀಡಿದ್ದಾರೆ. ರಂಪಾಟ ನಡೆಯುವ ವೇಳೆ ಶಿವಕುಮಾರ್ ಎಸ್ಪಿ ಮನೆ ಮುಂದೆ ಪಹರೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net