

ಮಂಡ್ಯ: ಸಂಸದರು ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂತಾರೆ. ಡ್ಯಾಂ ಪರಿಶೀಲನೆಗೆ ಬಂದ್ರೆ ಅವರನ್ನ ರೆಡ್ ಕಾರ್ಪೆಟ್ ಹಾಕಿ ಕರೆದುಕೊಂಡು ಹೋಗುತ್ತೇನೆ. ಮೊದಲೇ ಸಿನಿಮಾ ನಟಿ. ಅವರಿಗೆ ತೊಂದರೆ ಆಗೋದು ಬೇಡ. ಅದಕ್ಕೆ ರೆಡ್ ಕಾರ್ಪೆಟ್ ಹಾಸಿ ಕರೆದುಕೊಂಡು ಹೋಗುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ವಿರುದ್ಧ ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ.
ಪುಟ್ಗೋಸಿ 2.5 ಕೋಟಿ ಅನುದಾನ ತಂದು ಹಂಚೋದು ದೊಡ್ಡ ಕೆಲಸ ಅಲ್ಲ ಎಂದು ಸುಮಲತಾ ವಿರುದ್ಧ ಕಿಡಿಕಾರಿದರು. ಸ್ವಾಭಿಮಾನದ ಹೆಸರು ಹೇಳಿ ಗೆದ್ದು ಹೋದಲ್ಲವ್ವ. ಹೊಟ್ಟೆಗೆ ಇಟ್ಟಿಲ್ಲ, ಆಕ್ಸಿಜನ್ ಬೆಡ್ ಇಲ್ಲ, ಕೊಡಿಸು ಬಾ ಎಂದು ಸಂಸದೆಯನ್ನ ಜನರು ಕರೆಯುತ್ತಿದ್ದಾರೆ ಎಂದು ಪುಟ್ಟರಾಜಯ ವ್ಯಂಗ್ಯವಾಡಿದರು. ಇದನ್ನೂ ಓದಿರಿ ಆಸ್ಪತ್ರೆಯಲ್ಲಿ ಲೈಂಗಿಕ ಕಿರುಕುಳ, ಕೈ ಸನ್ನೆಯಲ್ಲೇ ಮಗನಿಗೆ ಹೇಳಿ ಕಣ್ಣೀರಿಟ್ಟ ಸೋಂಕಿತೆ: ವಾರ್ಡ್ ಬಾಯ್ ಅರೆಸ್ಟ್
ಮಂಡ್ಯ ಜಿಲ್ಲೆಯ ಶಾಸಕರು ಕೆಲಸ ಮಾಡ್ತಿಲ್ಲ ಎನ್ನುತ್ತಾರೆ. ರಾತ್ರಿ 2 ಗಂಟೆವರೆಗೆ ಬೆಡ್ ಕೊಡಿಸೋದು, ಬೆಳಗ್ಗೆ ಎದ್ದರೆ ಸತ್ತವರ ಮಣ್ಣು ಮಾಡೋದು. ಕೇವಲ 2 ಗಂಟೆ ನಿದ್ದೆ ಮಾಡಿ ನಾವು ಜನರ ಸೇವೆ ಮಾಡ್ತಿದ್ದೇವೆ. ಶಾಸಕರು ಜಿಲ್ಲೆಯಲ್ಲಿ ಕೆಲಸ ಮಾಡ್ತಿಲ್ಲವೇ ಎಂಬುದನ್ನ ಪತ್ರಕರ್ತರು ತೀರ್ಮಾನ ಮಾಡಿ. ಸರ್ಕಾರಿ ಕೋಟಾದ ಆಕ್ಸಿಜನ್ ಅನ್ನು ತಾನೇ ಕೊಡ್ತಿದ್ದೇನೆ ಎನ್ನುವುದು ಸಂಸದರ ಕೆಲಸವೇ? ಎಂದು ಪುಟ್ಟರಾಜು ಕಿಡಿಕಾರಿದರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ನೂರು ಆಕ್ಸಿಜನ್ ಸಿಲಿಂಡರ್ ಅನ್ನು ಜಿಲ್ಲೆಗೆ ಕೊಡುಗೆ ಕೊಟ್ಟಾಗಲೂ ಅವರು ಯಾವ ಪ್ರಚಾರ ಪಡೆಯಲಿಲ್ಲ. ಸರ್ಕಾರಿ ಕೋಟಾ ಆಕ್ಸಿಜನ್ ಕೊಟ್ಟು ನಾನು ಕೊಟ್ಟೆ ಎಂದು ಹೇಳಿ ಸಂಸದರು ಸಿಲುಕಿಕೊಂಡಿದ್ದಾರೆ. ಆ ತಪ್ಪನ್ನ ಮುಚ್ಚಿಕೊಳ್ಳಲು ಏನೇನೋ ಮಾತನಾಡಿದ್ರೆ ಏನು ಪ್ರಯೋಜ? ನನಗೆ ಅಂಬರೀಶ್ ಅಣ್ಣನ ಮೇಲೆ ಗೌರವ ಇದೆ. ಆದ್ದರಿಂದಲೇ ಲಘುವಾಗಿ ಮಾತನಾಡುವುದು ಬೇಡ ಎಂದು ಸುಮ್ಮನಿದ್ದೇವೆ. ನಿಮ್ಮ ಕೆಲಸವನ್ನ ನೀವು ಮಾಡಿ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸುಮಲತಾಗೆ ಪುಟ್ಟಸ್ವಾಮಿ ಹೇಳಿದ್ದಾರೆ.