ಆಸ್ಪತ್ರೆಯಲ್ಲಿ ಲೈಂಗಿಕ ಕಿರುಕುಳ, ಕೈ ಸನ್ನೆಯಲ್ಲೇ ಮಗನಿಗೆ ಹೇಳಿ ಕಣ್ಣೀರಿಟ್ಟ ಸೋಂಕಿತೆ: ವಾರ್ಡ್​ ಬಾಯ್ ಅರೆಸ್ಟ್

arrest
Published on

ಹುಬ್ಬಳ್ಳಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ‌ ಕೋವಿಡ್ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಪ್ರಕರಣ ಸಂಬಂಧ ಆಸ್ಪತ್ರೆಯ ವಾರ್ಡ್ ಬಾಯ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿಯ ಸಿರಗುಪ್ಪ ತಾಲೂಕಿನ 57 ವರ್ಷದ ಮಹಿಳೆಗೆ ಕರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಪಾಶ್ವವಾಯ ಪೀಡಿತೆಯಾಗಿದ್ದ ಕರೊನಾ ಸೋಂಕಿತ ಮಹಿಳೆಗೆ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆ ಮಹಿಳೆಯ ಪುತ್ರ ಕಳೆದ ವಾರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಮಗ ಆಸ್ಪತ್ರೆಗೆ ಬಂದಾಗ ಕೈ ಸನ್ನೆ ಮೂಲಕ ತಾಯಿ ತನ್ನ ಮೇಲಾದ ದೌರ್ಜನ್ಯ ಕುರಿತು ತಿಳಿಸಿದ್ದರು.

ಮೇ 23ರಂದು ಸಂತ್ರಸ್ತೆಯ ಮಗ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಕುರಿತು ‘ದಿಗ್ವಿಜಯ ನ್ಯೂಸ್’ಗೆ ಅಂದು ಪ್ರತಿಕ್ರಿಯಿಸಿದ ಖಾಸಗಿ ಆಸ್ಪತ್ರೆ ಎಂಡಿ ಡಾ. ಕ್ರಾಂತಿ ಕಿರಣ, ನಮ್ಮ ಆಸ್ಪತ್ರೆ ಸಿಬ್ಬಂದಿಯಿಂದ ತಪ್ಪು ನಡೆದಿಲ್ಲ. ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಶುದ್ಧ ಸುಳ್ಳು. ಸೋಂಕಿತ ಮಹಿಳೆಗೆ ಪಾಶ್ವವಾಯ ಆಗಿದೆ. ಅವರಿಗೆ ಸ್ಕ್ಯಾನಿಂಗ್ ಮಾಡಿಸುವ ವೇಳೆ ಆಸ್ಪತ್ರೆ ಸಿಬ್ಬಂದಿ ಲಿಪ್ಟ್ ಮಾಡಿರಬಹುದು. ಯೂರಿನ್ ಸರಾಗವಾಗಿ ಪಾಸ್ ಆಗಲು ಕ್ಯಾಥಡ್ರಲ್ ಪೈಪ್ ಹಾಕಬೇಕಾಗುತ್ತೆ. ಲೈಂಗಿಕ ದೌರ್ಜನ್ಯದ ಆರೋಪ ಮಾಡುವ ಪುತ್ರ ಆಸ್ಪತ್ರೆಯ ಅನುಮತಿ ಇಲ್ಲದೆ ಕೋವಿಡ್ ವಾರ್ಡ್​ ಪ್ರವೇಶ ಮಾಡಿದ್ದಾರೆ. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡ್ತಾ ಇದ್ದಾರೆ. ನಮ್ಮ ಆಸ್ಪತ್ರೆಯ ಸಿಸಿ ಕ್ಯಾಮರಾಗಳಲ್ಲಿ ಎಲ್ಲವೂ ದಾಖಲಾಗಿದೆ. ತನಿಖೆಯಿಂದ ಎಲ್ಲವೂ ದೃಢಪಡಲಿದೆ ಎಂದಿದ್ದರು.

ಘಟನೆ ನಂತರ ಆರೋಪಿ ಅಶೋಕ ಅಣ್ಣಿಗೇರಿಯಲ್ಲಿ ತಲೆ ಮರೆಸಿಕೊಂಡಿದ್ದ. ಬಳಿಕ, ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದ. ಆರೋಪಿಯನ್ನ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net