

ಮಂಡ್ಯ: ಹಲ್ಲೇಗೆರೆ ಗ್ರಾಮದ ಕಾಶಿವಿಶ್ವನಾಥ ದೇವಾಲಯದಲ್ಲಿ ನಾಪತ್ತೆಯಾಗಿದ್ದ ಶಿವಲಿಂಗ ಮತ್ತೆ ಗರ್ಭಗುಡಿಯಲ್ಲೇ ಪ್ರತ್ಯಕ್ಷವಾಗಿದೆ!
ಸೋಮವಾರ ರಾತ್ರಿ ಶಿವಲಿಂಗ ಮಾಯವಾಗಿತ್ತು. ದುಷ್ಕರ್ಮಿಗಳು ಶಿವಲಿಂಗ ಕಳವು ಮಾಡಿದ್ದಾರೆಂದು ಗ್ರಾಮಸ್ಥರು ಶಂಕಿಸಿದ್ದರು. ಈ ಬಗ್ಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬುಧವಾರ ಬೆಳಗ್ಗೆ ದೇವಾಲಯಕ್ಕೆ ಬಂದ ಗ್ರಾಮಸ್ಥರಿಗೆ ಶಾಕ್ ಕಾದಿತ್ತು. ಮೊದಲು ಶಿವಲಿಂಗವಿದ್ದ ಸ್ಥಳದಲ್ಲೇ ಶಿವಲಿಂಗ ಪ್ರತ್ಯಕ್ಷವಾಗಿದೆ.
ಹಲ್ಲೇಗೆರೆ ಗ್ರಾಮದ ಹೊರ ಭಾಗದಲ್ಲಿರುವ ಕಾಶಿವಿಶ್ವನಾಥ ದೇವಾಲಯಕ್ಕೆ 450 ವರ್ಷಗಳ ಇತಿಹಾಸವಿದೆ. ಕಾಶಿಯಿಂದ ತಂದು ಪ್ರತಿಷ್ಠಾಪಿಸಿದ್ದ ಶಿವಲಿಂಗ ಇದು.