ಸಾರಿಗೆ ಬಸ್​- ಬೈಕ್​ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಯುವಕರಿಬ್ಬರ ಸಾವು

accident
Published on

ಚಿಕ್ಕೋಡಿ: ಕೆಎಸ್​ಆರ್​ಟಿಸಿ ಬಸ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್​ ಸವಾರರಿಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ‌ ಕೇರೂರವಾಡಿ ಗ್ರಾಮದ ಚಿಕ್ಕೋಡಿ-ಮಿರಜ್ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.

ಬೈಕ್​ ಸವಾರರಾದ ಸವಾರ ಸಂತೋಷ ಮಾಗ(25) ಹಾಗೂ ಶ್ರೀಶೈಲ ಮಹಾದೇವ ಕೂರವಿ(27) ಮೃತ ದುರ್ದೈವಿಗಳು. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net