ದೊಡ್ಡ ತ್ಯಾಗಕ್ಕೆ ಸಿದ್ಧರಾದರೇ ಡಿಕೆಶಿ? ಕುತೂಹಲ ಮೂಡಿಸಿದೆ ಅವರ ಈ ಮಾತು...

DKS
Published on

ಮಂಗಳೂರು: ಕಾಂಗ್ರೆಸ್​ನಲ್ಲಿರುವ ಪ್ರತಿಯೊಂದು ಸ್ಥಾನವನ್ನೂ 50 ವರ್ಷದ ಒಳಗಿನವರಿಗೆ ನೀಡಬೇಕು ಎಂದು ಸಂಕಲ್ಪ ಮಾಡಲಾಗಿದೆ. ಆದ್ದರಿಂದ ನನ್ನನ್ನೂ ಸೇರಿ ಎಲ್ಲ ಹಿರಿಯ ನಾಯಕರು ತ್ಯಾಗಕ್ಕೆ ಸಿದ್ಧರಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಇತ್ತೀಚೆಗೆ ನಡೆದ ಪಕ್ಷದ ಚಿಂತನಾ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದ್ದು, ಅದಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಅವರೂ ಸಮ್ಮತಿ ಸೂಚಿಸಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಯುವಕರಿಗೆ, ಮಹಿಳೆಯವರಿಗೆ, ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಆದ್ದರಿಂದ ನನ್ನನ್ನೂ ಸೇರಿ ಎಲ್ಲ ಹಿರಿಯ ನಾಯಕರು ತ್ಯಾಗಕ್ಕೆ ಸಿದ್ಧರಿರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net