More

    ‘ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ, ಕಾರಂಜಿ ಕಲ್ಲು! ಡಮರುಗ, ಕಮಲ, ಆನೆ, ಕುದುರೆ… ಹಿಂದೂ ಚಿಹ್ನೆಯಲ್ಲ’

    ಬೆಂಗಳೂರು: ಜ್ಞಾನವಾಪಿ ಮಸೀದಿ ಪ್ರಕರಣ ಸದ್ಯ ಸುಪ್ರೀಂಕೋರ್ಟ್​ ಅಂಗಳದಲ್ಲಿದ್ದು, ಈ ಪ್ರಕರಣ ಸಂಬಂಧ ಯಾವುದೇ ವಿಚಾರಣೆ, ಸರ್ವೇ ಮಾಡುವಂತಿಲ್ಲ ಎಂದು ವಾರಣಾಸಿ ಕೋರ್ಟ್​ಗೆ ಸುಪ್ರೀಂ ಕೋರ್ಟ್​ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಸುಪ್ರೀಂ ಕೋರ್ಟ್​ನ ತ್ರಿಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಲಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಮಸೀದಿಯಲ್ಲಿ ಸಿಕ್ಕಿರೋದು ಶಿವಲಿಂಗವಲ್ಲ, ಅದೊಂದು ಕಾರಂಜಿ ಕಲ್ಲು. ಈ ಬಗ್ಗೆ ನಮಗೆ ಮೊದಲೇ ಗೊತ್ತಿತ್ತು ಎಂದು ಮುಸ್ಲಿಂ ಮುಖಂಡ ಅಬ್ದುಲ್​ ರಜಾಕ್​ ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಯನ್ನು ಖಂಡಿಸಿರುವ ಶ್ರೀರಾಮ ಸೇನೆ ಮುಖಂಡ ಮೋಹನ್​ ಭಟ್​, ಶಿವಲಿಂಗಕ್ಕೂ ಕಾರಂಜಿಗೂ ವ್ಯತ್ಯಾಸ ಇಲ್ಲವೇ? ಎಂದು ಕಿಡಿಕಾರಿದ್ದಾರೆ.

    ದಿಗ್ವಿಜಯ ನ್ಯೂಸ್​ ಜತೆ ದೂರವಾಣಿಯಲ್ಲಿ ಮಾತನಾಡಿದ ಅಬ್ದುಲ್​ ರಜಾಕ್​, ಸರ್ವೇ ವೇಳೆ ಮಸೀದಿ ಒಳಗೆ ಆಗಲಿ, ಅಥವಾ ನೆಲದ ಕೆಳಗೆಯಾಗಲಿ ಏನೂ ಸಿಕ್ಕಿಲ್ಲ. ಆದರೆ ಕೊನೇ ದಿನ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಅದು ಶಿವಲಿಂಗ ಅಲ್ಲ, ಕಾರಂಜಿ ಕಲ್ಲು. 350 ವರ್ಷಗಳಲ್ಲಿ ಅಕಸ್ಮಾತ್​ ಅದು ಹಿಂದೂ ಚಿಹ್ನೆ ಆಗಿದ್ದರೆ ಮುಸ್ಲಿಮರು ಯಾವತ್ತೋ ತೆಗೆಯಬಹುದಿತ್ತು. ಕೆಲವೊಂದು ಕಡೆ ಡಮರುಗ, ಕುದುರೆ, ಕಮಲ, ಆನೆ, ಕಡ್ಗ ಚಿಹ್ನೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಇದೆಲ್ಲವೂ ಹಿಂದೂ ಚಿಹ್ನೆ ಎಂದು ಹೇಳಲು ಬರಲ್ಲ. ಆ ಕಾಲದ ರಾಜರು ಹಿಂದುಗಳನ್ನು ಮದ್ವೆ ಮಾಡಿಕೊಂಡ್ರು. ಆ ಕಾಲದ ಒಬ್ಬ ರಾಜ ಹಿಂದು-ಮುಸ್ಲಿಂ ಧರ್ಮವನ್ನ ಸೇರಿಸಿ ಹೊಸ ಧರ್ಮವನ್ನೇ ಸೃಷ್ಟಿಸಿದ್ದ ಎಂದರು.

    ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶ್ರೀರಾಮಸೇನೆ ಮುಖಂಡ ಮೋಹನ್​ ಭಟ್​, ವಿಗ್ರಹ ಪೂಜೆ ಅವರಿಗೆ ನಿಷಿದ್ಧ. ಅಂತಹದ್ದರಲ್ಲಿ ಅದು ಯಾವ ರೀತಿಯ ವಾಸ್ತುಶಿಲ್ಪ? ಶಿವಲಿಂಗಕ್ಕೂ ಕಾರಂಜಿಗೂ ವ್ಯತ್ಯಾಸ ಇಲ್ಲವೇ? ಮಸೀದಿಯಲ್ಲಿ ಎಲ್ಲಿಯಾದರೂ ವಿಗ್ರಹ ಇಟ್ಟಿದ್ದಾರಾ? ಸಮರ್ಥನೆ ಮಾಡಿಕೊಳ್ಳಲು ಹೋಗೆಲ್ಲಾ ಹೇಳ್ತಿದ್ದಾರೆ ಎಂದು ಕಿಡಿಕಾರಿದರು.

    ಇದನ್ನು ಅಲ್ಲಗಳೆದ ಅಬ್ದುಲ್​ ರಜಾಕ್​, ಕೆಲ ಮಸೀದಿಯ ಗೋಡೆ ಮೇಲೂ ವಿಗ್ರಹಗಳಿವೆ. ಒಬ್ಬ ರಾಜ ಎರಡೂ ಧರ್ಮವನ್ನು ಒಂದು ಮಾಡಿದ ಸಂದರ್ಭದಲ್ಲಿ ಇಂತಹದ್ದನ್ನು ಕಟ್ಟಿಸಿರಬಹುದು. ಅಲ್ಲಿ ಶಿವಲಿಂಗ ಇಲ್ಲ. ಅಲ್ಲಿ ಕಾರಂಜಿ ಕಲ್ಲು ಇದೆ ಎಂಬುದು ಮೊದಲೇ ಗೊತ್ತಿತ್ತು. ವರ್ಷಕ್ಕೆ ನಾಲ್ಕು ಬಾರಿ ಶುಚಿ ಮಾಡ್ತಿದ್ವು. ಸರ್ವೇ ವೇಳೆ ಏನೂ ಸಿಗಲಿಲ್ಲ. ಆದರೂ ವಿಷ್ಣುಜೈನ್​ ಅವರು ಶಿವಲಿಂಗ ಇದೆ ಎಂದು ಸೃಷ್ಟಿಸಿದರು ಎಂದು ಅಬ್ದುಲ್​ ರಜಾಕ್​ ಸಮಜಾಯಿಷಿ ಕೊಟ್ಟರು.

    ಕೂಲಿಕಾರಳ ಮಗ SSLC ಪರೀಕ್ಷೆಯಲ್ಲಿ ಟಾಪರ್​! ತಂದೆ ಇಲ್ಲದ ನೋವು, ಕಡುಬಡತನ ಇದ್ದರೂ ಓದಿನಲ್ಲಿ ಶ್ರೀಮಂತ

    PSI ಹುದ್ದೆ ಅಕ್ರಮ: ಮೊದಲ ರಾತ್ರಿಯ ಖುಷಿಯಲ್ಲಿದ್ದವನಿಗೆ ಶಾಕ್ ಕೊಟ್ಟ ಸಿಐಡಿ​! ದೇವಸ್ಥಾನದಲ್ಲೇ ನವವಿವಾಹಿತ ವಶಕ್ಕೆ

    ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಶೇ.85.63 ಉತ್ತೀರ್ಣ, ಈ ಬಾರಿಯೂ ಬಾಲಕಿಯರೇ ಮೇಲುಗೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts